Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪಿಡುಗುಗಳ ವಿರುದ್ದ ಅರಿವಿನ ಅಭಿಯಾನಕ್ಕೆ ಸಹಕಾರ ನೀಡಲು ಮನವಿ

ಮಂಡ್ಯ ಜಿಲ್ಲೆಯಾದ್ಯಂತ ಮಹಿಳಾ ಮುನ್ನಡೆ ಮತ್ತು ಅತ್ಯಾಚಾರ ವಿರೋಧಿ ಆಂದೋಲನದ ವತಿಯಿಂದ ಹಲವು ವರ್ಷಗಳಿಂದ ಬಾಲ್ಯವಿವಾಹ, ಅತ್ಯಾಚಾರ, ಮರ್ಯಾದೆಗೇಡು ಹತ್ಯೆ ಮತ್ತು ಹೆಣ್ಣು ಭ್ರೂಣ ಹತ್ಯೆಗಳಂತಹ ಪಿಡುಗುಗಳ ವಿರುದ್ದ ನಿರಂತರವಾಗಿ ಅರಿವಿನ ಅಭಿಯಾನಗಳು, ಕಾರ್ಯಾಗಾರಗಳನ್ನು ನಡೆಸುತ್ತಾ ಬರಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹದ್ದೇ ಅಭಿಯಾನ ಆಯೋಜಿಸಲು ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆಯು ಸಹಕಾರ ನೀಡಬೇಕೆಂದು ಮಹಿಳಾ ಮುನ್ನಡೆ ಸಂಘಟನೆಯ ಶಿಲ್ಪಾ ಅವರು, ಎಎಸ್ಪಿ ತಿಮ್ಮಯ್ಯ ಅವರ ಬಳಿ ವಿಷಯ ಪ್ರಸ್ತಾಪ ಮಾಡಿದರು.

nudikarnataka.com

ಮಂಡ್ಯದಲ್ಲಿ ಗಂಭೀರ ಸ್ವರೂಪ ಪಡೆದು ಕೊಂಡಿರುವ ಹೆಣ್ಣು ಭ್ರೂಣ ಹತ್ಯೆ ಮತ್ತು ಬಾಲ್ಯವಿವಾಹ ಹಾಗೂ ಲೈಂಗಿಕ ಹಿಂಸಾಚಾರದ ವಿರುದ್ದ ಎಂದಿನಂತೆ, ನಮ್ಮ ಅರಿವಿನ ಅಭಿಯಾನವನ್ನು ಕೊಂಡೊಯ್ಯಲು ಪೊಲೀಸ್ ಇಲಾಖೆ ಸಹಕಾರ ನೀಡಬೇಕು. ತಮ್ಮ ಸಂಘಟನೆ ವತಿಯಿಂದ ಶಾಲಾ ಕಾಲೇಜು ಮತ್ತು ವಿದ್ಯಾರ್ಥಿ ವಸತಿ ನಿಲಯಗಳು ಹಾಗೂ ಪ್ರತಿ ಪಂಜಾಯ್ತಿ ಮಟ್ಟದಲ್ಲಿ ಮಹಿಳೆಯರ ನಡುವೆ ಸಾಗಿ ಅರಿವಿನ ಅಭಿಯಾನದ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದು, ಆಯಾಯ ಸಂಬಂಧ ಪಟ್ಟ ಇಲಾಖೆಗಳಿಗೆ ನಿರ್ದೇಶನ ಕೊಟ್ಟು ನಮಗೆ ಅನುಮತಿಸುವ ಮೂಲಕ ಸಾಧ್ಯವಾದ ಕಡೆಗಳಲ್ಲೂ ತಾವು ಭಾಗವಹಿಸಿ ಸಹಕಾರ ನೀಡಬೇಕೆಂದು ಹಕ್ಕೊತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ, ಜಾಗೃತ ಕರ್ನಾಟಕದ ಜಗದೀಶ್ ನಗರಕೆರೆ, ಸಂತೋಷ್, ನಾಗೇಶ್, ಜಯರಾಂ,  ಕರ್ನಾಟಕ ಜನಶಕ್ತಿದ ಪೂರ್ಣಿಮಾ, ಶಿಲ್ಪ, ಕೃಷಿ ಕೂಲಿಕಾರರ ಸಂಘ ಶಿವಕುಮಾರ್, ಮಲ್ಲಿಕಾರ್ಜುನ್ ಮುಂತಾದವರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ