ಪಾಂಡವಪುರ ಟೌನ್ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಸಾಗರ್ ಎಂಬ ಯುವಕನ ಮೇಲೆ ಅಭಿಷೇಕ್ ಗೌಡ ಎಂಬ ಪೇದೆ ಏಕಾಏಕಿ ಹಲ್ಲೆ ಮಾಡಿದ್ದು, ಇದರಿಂದ ಕುಪಿತನಾದ ಯುವಕನು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಈ ಪ್ರಕರಣದಲ್ಲಿ ಪೊಲೀಸರು ಸೇರಿದಂತೆ ತಪ್ಪಿತಸ್ಥನ ಯುವಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಗತಿಪರ ಸಂಘಟನೆಗಳ ಮುಖಂಡರು ಇಂದು ಮಂಡ್ಯ ಎಎಸ್ಪಿ ತಿಮ್ಮಯ್ಯ ಅವರಿಗೆ ಮನವಿ ಮಾಡಿದರು.
ಪ್ರಗತಿಪರ ಮುಖಂಡ ಎಂ.ವಿ.ಕೃಷ್ಣ, ಜಾಗೃತ ಕರ್ನಾಟಕದ ನಾಗೇಶ್, ಸಂತೋಷ್, ನಗರಕೆರೆ ಜಗದೀಶ್, ಕರವೇ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ, ಮಹಿಳಾ ಮುನ್ನಡೆ ಸಂಘಟನೆಯ ಪೂರ್ಣಿಮಾ, ಶಿಲ್ಪಾ, ಶಿವಕುಮಾರ್, ಮಲ್ಲಿಕಾರ್ಜುನ್ ಅವರು ಎಎಸ್ಪಿಯವರನ್ನು ಭೇಟಿ ಮಾಡಿ, ಯುವಕನ ಮೇಲೆ ಪೊಲೀಸ್ ಪೇದೆ ಮೊದಲು ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಿ, ಆದರೆ ಹಲ್ಲೆ ನಡೆಸುವ ಅಧಿಕಾರ ನೀಡಿದವರು ಯಾರು ? ಈ ಘಟನೆಯಿಂದ ಪೊಲೀಸ್ ಇಲಾಖೆಯನ್ನೇ ಜನರು ತಪ್ಪಾಗಿ ನೋಡುವ ಸಂಭವವಿದೆ. ಹಾಗಾಗಿ ಎಲ್ಲ ಠಾಣೆಗಳಲ್ಲಿ ಪೊಲೀಸರಿಗೆ ವಿವೇಕದಿಂದ ವರ್ತಿಸಲು ಸೂಚಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಂ.ವಿ.ಕೃಷ್ಣ ಅವರು ಮಾತನಾಡಿ, ಪಾಂಡವಪುರದ ಪೋಲೀಸ್ ಠಾಣೆಯಲ್ಲಿ ಯುವಕನೊಬ್ಬನ ಮೇಲೆ ಪೊಲೀಸರೆಲ್ಲರು ಮುಗಿಬಿದ್ದು ಹಲ್ಲೆ ಮಾಡಿದ್ದನ್ನು ತನಿಖೆ ಮಾಡಬೇಕೆಂದು, ಈ ಹಿಂದೆ ಸಲ್ಲಿಸಿದ ಮನವಿ ಎಲ್ಲಿಗೆ ಬಂದಿದೆ ಎಂದು ಪ್ರಶ್ನಿಸಿದರು. ಪೋಲೀಸರಿಗೆ ಸಾರ್ವಜನಿಕರ ಜತೆ ಹೇಗೆ ವರ್ತಿಸುವ ಬಗ್ಗೆ ಕೌನ್ಸಿಲಿಂಗ್ ಮಾಡಿಸಬೇಕೆಂದು, ಇಲ್ಲವಾದಲ್ಲಿ ಇಲಾಖೆಯ ಘನತೆಗೆ ಕುಂದು ಬರುತ್ತದೆ ಎಂದು ಮನವರಿಕೆ ಮಾಡಿದರು.
ಹೊಡೆದ ವ್ಯಕ್ತಿಯ ಮೇಲೆ ಕೇಸ್ ಹಾಕಿ ನ್ಯಾಯಾಲಯಕ್ಕೆ ಕಳುಹಿಸುವ ಬದಲು ಹೊಡೆಯಲು ಯಾವ ಕಾಯಿದೆಯಲ್ಲಿ ಹೇಳುತ್ತೆ ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆದು ತಪ್ಪತಸ್ಥರಿಗೆ ದಂಡನೆ ಆಗಲಿ. ಎಲ್ಲರಿಗೂ ಒಂದೇ ಕಾನೂನು ಯಾರೇ ಹಲ್ಲೆ ಮಾಡಿದರೂ ಸಂವಿಧಾನದ ಪ್ರಕಾರ ತಪ್ಪೇ ಪೊಲೀಸ್ ಇಲಾಖೆಗೆ ಯಾರನ್ನು ಬೇಕಾದರೂ ಬೈಯ್ಯಬಹುದು, ಹೊಡೆಯಬಹುದು ನಮಗೆ ಅಧಿಕಾರ ಇದೆ ಎಂಬ ಮನಸ್ಥಿತಿ ಇದೆ. ಈ ಮನಸ್ಥಿತಿ ಬದಲಾಗಲೇಬೇಕು ಎಂದು ಒತ್ತಾಯಿಸಿದ್ದಾರೆ.
ಮೂಲ ಸೌಕರ್ಯ ಒದಗಿಸಲು ಆಗ್ರಹ
ಮಳವಳ್ಳಿ ಪೊಲೀಸ್ ಠಾಣೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಮುಖ್ಯವಾಗಿ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು, ಅಲ್ಲದೇ ಪೊಲೀಸ್ ಠಾಣೆಗೆ ಮುಂಭಾಗದ ರಸ್ತೆಗೆ ಡುಬ್ಬ ನಿರ್ಮಿಸಬೇಕೆಂದು ಆಗ್ರಹಿಸಿದರು.




