ಮಂಡ್ಯದಲ್ಲಿ ಶುಕ್ರವಾರ ಸಂಜೆ ಅನುಸತೀಶ್ ನಿಧನರಾಗಿದ್ದಾರೆ. ಅವರು ನುಡಿ ಭಾರತಿ, ಮಂಡ್ಯ ಸುದ್ದಿ, ಸಂಜೆ ವಾಣಿ ಪತ್ರಿಕೆ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದರು
ಮೃತರು ಪತ್ನಿ ಶೋಭಾ, ಮಕ್ಕಳಾದ ಸಚಿನ್, ಸ್ಪಂದನ ಸೇರಿದಂತೆ ಬಂಧು-ಬಳಗದವರನ್ನು ಬಿಟ್ಟು ಅಗಲಿದ್ದಾರೆ
ಮೃತರ ಅಂತ್ಯಸಂಸ್ಕಾರ ಚನ್ನಪಟ್ಟಣ ತಾಲೂಕಿನ ಶಂಕಲಗೆರೆ ಯಲ್ಲಿ ಶನಿವಾರ (ಇಂದು )ಮದ್ಯಾಹ್ನ ಜರುಗಲಿದೆ
ಇವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಮ್, ಕೆರಗೋಡು ಸೋಮಶೇಖರ್, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ. ಎನ್. ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್, ಮಾಜಿ ಅಧ್ಯಕ್ಷರಾದ ಪಿ. ಜೆ. ಚೈತನ್ಯ ಕುಮಾರ್, ಡಿ ಎಲ್ ಲಿಂಗರಾಜು, ಕೆ. ಎನ್. ರವಿ, ಕೆ. ಸಿ. ಮಂಜುನಾಥ್, ಬಿ. ಪಿ ಪ್ರಕಾಶ್, ಕೃಷ್ಣ ಸ್ವರ್ಣಸಂದ್ರ, ನವೀನ್ ಚಿಕ್ಕಮಂಡ್ಯ, ಹಿರಿಯ ಪತ್ರಕರ್ತರಾದ ಬಸವೇಗೌಡ ಅವರು ಸಂತಾಪ ಸೂಚಿಸಿದ್ದಾರೆ.




