Thursday, November 19, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| 5ನೇ ತರಗತಿ ಓದಿದ ಮಹಿಳೆಗೆ ಪೋಸ್ಟ್ ಮಾಸ್ಟರ್ ಹುದ್ದೆ ; ಅಂಚೆ ಕಚೇರಿ ಗ್ರಾಹಕರಿಗೆ 10 ಲಕ್ಷ ರೂ. ಪಂಗನಾಮ

ಕೇಂದ್ರ ಸರ್ಕಾರದ ಅಂಚೆ ಕಚೇರಿಯ ಅಧಿಕಾರಿಗಳ ಯಡವಟ್ಟಿನಿಂದ ಅನಕ್ಷರಸ್ಥ ಮಹಿಳೆಗೆ ಸಹಾಯಕ ಪೋಸ್ಟ್ ಮಾಸ್ಟರ್ ಹುದ್ದೆಯನ್ನು ನೀಡಲಾಗಿದೆ, ಕೇವಲ 5 ನೇ ತರಗತಿಯವರೆಗೆ ಓದಿರುವ ಮಹಿಳೆ ಅಂಚೆ ಕಚೇರಿ ಕೆಲಸ ನಿರ್ವಹಿಸಲು ಬರದೆ ತನ್ನ ಮಗನಿಗೆ ಅಕ್ರಮವಾಗಿ ಪೋಸ್ಟ್ ಆಫೀಸ್ ವಹಿವಾಟು ವಹಿಸಿದ ಪರಿಣಾಮ, ಆಕೆಯ ಮಗ ಗ್ರಾಹಕರಿಗೆ ಬರೋಬ್ಬರಿ 10 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಿ ಪರಾರಿಯಾಗಿರುವ ಘಟನೆ ನಾಗಮಂಗಲ ತಾಲೂಕಿನ ಲಾಳನಕೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬಿದರಕೆರೆ ಅಂಚೆ ಕಚೇರಿಯಲ್ಲಿ ನಡೆದಿದೆ.

ಬಿದರಕೆರೆ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಸುನಂದಮ್ಮ ಅವರ ಪುತ್ರ ದೊರೆಸ್ವಾಮಿ ಅಲಿಯಾಸ್ ರಾಜು ಗ್ರಾಹಕರಿಗೆ 10 ಲಕ್ಷ ರೂ.ವಂಚಿಸಿದ ಆರೋಪಿ.

ಘಟನೆಯ ವಿವರ 

ಬಿದರಕೆರೆ ಗ್ರಾಮದಲ್ಲಿ ಪುಟ್ಟಸ್ವಾಮಿ ಮುಖ್ಯ ಪೋಸ್ಟ್ ಆಫೀಸರ್ ಕಾರ್ಯನಿರ್ವಹಿಸುತ್ತಿದ್ದರು, ಇವರ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಕೇವಲ 5 ನೇ ತರಗತಿ ಓದಿರುವ ಪತ್ನಿ ಸುನಂದಮ್ಮ ತಮ್ಮ ಪ್ರಭಾವ ಬಳಸಿ ಸಹಾಯಕ ಪೋಸ್ಟ್ ಪೋಸ್ಟರ್ ಹುದ್ದೆಯನ್ನು ಗಿಟ್ಟಿಸಿದ್ದರು. ಸ್ಪಷ್ಟವಾಗಿ ಓದಲು ಬರೆಯಲು ಬಾರದ  ಈಕೆ ತನ್ನ ಮಗನಾದ ದೊರೆಸ್ವಾಮಿ ಅಲಿಯಾಸ್ ರಾಜುಗೆ ಪೋಸ್ಟ್ ಆಫೀಸ್ ಕಾರ್ಯಾಲಯದ ಕೆಲಸವನ್ನು ನಿರ್ವಹಿಸಲು ಬಿಟ್ಟಿದ್ದರು. ಇದನ್ನೇ ದುರುಪಯೋಗ ಮಾಡಿಕೊಂಡ ಆರೋಪಿ ರಾಜು, ಗ್ರಾಮೀಣ ಪ್ರದೇಶದ ವಯೋವೃದ್ದ ಪುರುಷ ಮತ್ತು ಮಹಿಳೆಯರನ್ನು ಯಾಮಾರಿಸಿ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿ ಪರಾರಿಯಾಗಿದ್ದಾನೆ.

ಬಿದರಕೆರೆ ಪೋಸ್ಟ್ ಆಫೀಸ್ ಕಚೇರಿಗೆ ಸುತ್ತಮುತ್ತ ಹತ್ತಾರು ಹಳ್ಳಿಗಳು ಒಳಪಡುತ್ತವೆ ವಂಚನೆಗೆ ಒಳಗಾದ ಮಹಿಳೆಯರು ತಿಳಿಸುವಂತೆ ಆರ್.ಡಿ. ಎಫ್‌.ಡಿ. ಓ.ಎ.ಪಿ. ವಿಧವೆವೇತನ ಸೇರಿದಂತೆ ಇನ್ನಿತರ ಯೋಜನೆಗಳಲ್ಲಿ ತೊಡಗಿಸಲು ಬಂದ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ.

ಬಣ್ಣ ಬಣ್ಣದ ಮಾತುಗಳನ್ನು ಆಡುತ್ತಾ ಹಣವನ್ನು ಪಡೆದು ಬುಕ್ ಮತ್ತು ರಶೀದಿಯನ್ನು ನಂತರ ಕೊಡುತ್ತೇನೆ ಎಂದು ಹೇಳಿತಿದ್ದ. ಈಗ ನೋಡಿದರೆ ಹಣವು ಇಲ್ಲ ದಾಖಲೆಯೂ ಇಲ್ಲ ಎಂದು ಕಣ್ಣೀರು ಹಾಕುತ್ತಾ ಈ ವಂಚನೆಗೆ ಮುಖ್ಯ ಪೋಸ್ಟ್ ಆಫೀಸ್ ಕಚೇರಿಯ ಅಧಿಕಾರಿಗಳು ಬೇಜವಾಬ್ದಾರಿತನ ಕಾರಣ ಎಂದು ವಯೋ ವೃದ್ಧರು ಆರೋಪ ಮಾಡಿದ್ದಾರೆ.

ಹಣ ಕಳೆದುಕೊಂಡವರ ಪಟ್ಟಿಯಂತೆ ಬಿದರಕೆರೆ ಗ್ರಾಮದ ಮಂಜಮ್ಮ ₹4 ಲಕ್ಷ, ಕೆಂಪಮ್ಮ ₹1.50 ಲಕ್ಷ, ಜಯಮ್ಮ ₹22 ಸಾವಿರ, ನಿಂಗಪ್ಪ ₹50 ಸಾವಿರ, ಪಂಕಜ ₹25 ಸಾವಿರ, ಲಕ್ಷ್ಮಮ್ಮ ₹20 ಸಾವಿರ, ಶಾಂತಮ್ಮ ₹40 ಸಾವಿರ, ವರಲಕ್ಷ್ಮಿ ₹ 14 ಸಾವಿರ, ಬಸವರಾಜು ₹ 40 ಸಾವಿರ, ಲೈಲಾ ₹ 10 ಸಾವಿರ ಹಾಗೂ ಕೆಂಪಣ್ಣ ₹45 ಸಾವಿರ ಹಣವನ್ನು ಕಳೆದುಕೊಂಡು ವಂಚನೆಗೆ ಒಳಗಾದ ವ್ಯಕ್ತಿಗಳಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ಮುಖ್ಯ ಪೋಸ್ಟ್ ಆಫೀಸ್ ಕಚೇರಿ ಅಧಿಕಾರಿಗಳ ಬೇಜವಾಬ್ದಾರಿ ತರ ಎದ್ದು ಕಾಣುತ್ತದೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಕೇವಲ ಐದನೇ ತರಗತಿ ಓದಿ ಒಬ್ಬ ಮಹಿಳೆಗೆ ಪೋಸ್ಟ್ ಆಫೀಸ್ ಕಚೇರಿಯಲ್ಲಿ ಹುದ್ದೆ ನೀಡಲಾಗಿದೆ. ಆಕೆಯ ಮುಗ್ದತೆಯನ್ನು ಬಳಸಿಕೊಂಡ ಮಗ ಗ್ರಾಮೀಣ ಪ್ರದೇಶ ಜನತೆಯನ್ನು ವಂಚಿಸಿದ್ದಾರೆ. ಇದನ್ನು ಗಮನಿಸಿದರೆ ಅಂಚೆ ಇಲಾಖೆಯ ಮೇಲಾಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ