Thursday, November 19, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಲಾಳನಕೆರೆ ಗ್ರಾ.ಪಂ. ಅವಿಶ್ವಾಸ ನಿರ್ಣಯ ಸಕ್ಸಸ್: ಅಧ್ಯಕ್ಷರ ವಿರುದ್ಧ ತಿರುಗಿ ಬಿದ್ದ ಸದಸ್ಯರು

ನಾಗಮಂಗಲ ತಾಲ್ಲೂಕಿನ ಲಾಳನಕೆರೆ ಗ್ರಾಮ ಪಂಚಾಯಿತಿಗೆ ಒಂದುವರೆ ವರ್ಷದ ಹಿಂದೆ ಹದಿಮೂರು ಗ್ರಾಮ ಪಂಚಾಯಿತಿ ಸದಸ್ಯರು ಬಹುಮತ ನೀಡಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದ ಬಿ ಜಿ ಜಯಕುಮಾರ್ ವಿರುದ್ಧ ಪ್ರಸ್ತುತ ಗ್ರಾಮ ಪಂಚಾಯತಿ ಸದಸ್ಯರು ತಿರುಗು ಬಿದ್ದಿದ್ದು ಅವಿಶ್ವಾಸ ನಿರ್ಣಯಕ್ಕೆ ಪಾಂಡವಪುರ ಉಪ ವಿಭಾಗ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು ಅದರಂತೆ ಅವಿಶ್ವಾಸ ನಿರ್ಣಯದ ದಿನಾಂಕವನ್ನು ಇಂದು ನಿಗದಿ ಮಾಡಲಾಗಿತ್ತು

ಲಾಳನಕೆರೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಉಪ ವಿಭಾಗಧಿಕಾರಿ ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಪಂಚಾಯತಿ ವ್ಯ 13 ಸದಸ್ಯರಲ್ಲಿ ಅಧ್ಯಕ್ಷ ಜಯಕುಮಾರ್ ಮತ್ತು ಸದಸ್ಯ ಉಮೇಶ್ ಹೊರೆತುಪಡಿಸಿ ಉಳಿದ 11 ಜನರು ಹಾಜರಿದ್ದು ಬಹುಮತವನ್ನು ಸಾಬಿತುಪಡಿಸಿ ಅಂಗೀಕರಿಸಲಾಯಿತು

ಉಪವಿಭಾಗಾಧಿಕಾರಿಗಳು ಶ್ರೀನಿವಾಸ್ ಮಾತನಾಡಿ ನಿಯಮ ಅನುಸಾರ ಅವಿಶ್ವಾಸ ನಿರ್ಣಯಕ್ಕೆ ಇರಬೇಕಾದಂತಹ ಬಹುಮತ ದೊರೆತ ಕಾರಣ ಅವಿಶ್ವಾಸಕ್ಕೆ 11 ಜನ ಗ್ರಾಮ ಪಂಚಾಯತಿ ಸದಸ್ಯರು ಮತ ಚಲಾಯಿಸಿದ್ದು ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದರು

ಕಾಂಗ್ರೆಸ್ ಮುಖಂಡ ಮತ್ತು ಗ್ರಾಮ ಪಂಚಾಯತಿ ಸದಸ್ಯ ಅಣೆ ಚನ್ನಾಪುರ ಮಂಜೇಶ್ ಮಾತನಾಡಿ ಅಧ್ಯಕ್ಷರು ಸರ್ವ ಸದಸ್ಯರನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿಗೆ ಒತ್ತು ನೀಡಲಿಲ್ಲ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು ಅದ್ದರಿಂದ ಸರ್ವ ಸದಸ್ಯರು ಇಂದು ಅಧಿಕೃತವಾಗಿ ಅವಿಶ್ವಾಸ ನಿರ್ಣಯವನ್ನು ತೆಗೆದುಕೊಂಡು ಬಂದಿದ್ದೇವೆ ಮುಂದಿನ ದಿನದಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದರು

ಮತ್ತೊಬ್ಬ ಗ್ರಾಮ ಪಂಚಾಯತಿ ಸದಸ್ಯೆ ಮಾನಸ ಮಾತನಾಡಿ ನಮ್ಮ ಪಂಚಾಯತಿ ಅಭಿವೃದ್ಧಿ ಕುಂಠಿತವಾದ ಹಿನ್ನೆಲೆಯಲ್ಲಿ ಈ ನಿರ್ಣಯಕ್ಕೆ ಬರಲಾಯಿತು ಎಂದು ತಿಳಿಸಿದರು

ಅವಿಶ್ವಾಸ ನಿರ್ಣಯ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು. ಕಂದಾಯ ಇಲಾಖೆ ಅಧಿಕಾರಿಗಳು.ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ