Wednesday, November 18, 2026

ಪ್ರಾಯೋಗಿಕ ಆವೃತ್ತಿ

ಸಿಟಿ ಕೋ- ಆಪರೇಟಿವ್ ಬ್ಯಾಂಕ್ ಅಭಿವೃದ್ಧಿಗೆ ಒತ್ತು- ಸಿ.ಬೋರೇಗೌಡ

ಆರ್.ಬಿ.ಐ.ನ ನಿಯಮಾನುಸಾರ ಬ್ಯಾಂಕ್ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಮಂಡ್ಯ ಸಿಟಿ ಕೋ- ಆಪರೇಟಿವ್ ಬ್ಯಾಂಕ್‌ನ ಆಡಳಿತ ಮಂಡಳಿ ಅಧ್ಯಕ್ಷ ಸಿ.ಬೋರೇಗೌಡ ತಿಳಿಸಿದರು.

ಮಂಡ್ಯ ನಗರದ ರೈತ ಸಭಾಂಗಣದಲ್ಲಿ ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನ ಆಡಳಿತ ಮಂಡಳಿ ಆಯೋಜಿಸಿದ್ದ ಸರ್ವ ಸದಸ್ಯರ 38ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರ ದಕ್ಷತೆಯಲ್ಲಿ ಸಾಗಿ, ಲಾಭದಾಯಕವಾಗಿ ಅಭಿವೃದ್ದಿಗೊಳ್ಳುತ್ತಿದೆ, ಇದಕ್ಕೆ ಕಾರಣ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ಮತ್ತು ಬ್ಯಾಂಕಿನ ಷೇರುದಾರರ ಸಹಕಾರವಾಗಿದೆ ಎಂದು ನುಡಿದರು.

ಮುಂದಿನ ದಿನಗಳಲ್ಲಿನ ಅಭಿವೃದ್ದಿಗಾಗಿ ಕ್ರೀಯಾ ಯೋಜನೆ ರೂಪಿಸಲಾಗಿದೆ, ಬ್ಯಾಂಕಿನ ಷೇರು ಬಂಡವಾಳವನ್ನು ವೃದ್ದಿಸುವುದು, ಪ್ರತಿವರ್ಷ 3 ಕೋಟಿ ರೂ.ಠೇವಣಿಯನ್ನು ಸಂಗ್ರಹಿಸಿವ ಗುರಿ ಹೊಂದಿದೆ, ಗ್ರಾಹಕ ಮತ್ತು ಸದಸ್ಯರಿಗೆ ದಿನನಿತ್ಯ ಚಿನ್ನಾಭರಣ ಸಾಲವನ್ನು ನೀಡಲಾಗುವುದು, ಸುಸ್ತಿ ಸಾಲಗಳನ್ನು ಪರಿಣಾಮಕಾರಿಯಾಗಿ ವಸೂಲಾತಿ ಮಾಡಲಾಗುವುದು ಎಂದು ತಿಳಿಸಿದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಆನಂದ್ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಸಹಕಾರ ಬ್ಯಾಂಕ್‌ಗಳಲ್ಲಿ ಗ್ರಾಹಕರ ಠೇವಣಿಗೆ ಹೆಚ್ಚಿನ ಬಡ್ಡಿ ನೀಡಲಾಗುವುದು, ಹಿರಿಯ ನಾಗರೀಕರ ಠೇವಣಿಗೆ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ, ಸದುಪಯೋಗ ಪಡಿಸಿಕೊಳ್ಳಿ ಎಂದು ಮನಿವ ಮಾಡಿದರು. ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಭೆಯಲ್ಲಿ ಆಡಳಿತ ಮಾಂಡಳಿಯ ನಿರ್ದೇಶಕರಾದ ಎಚ್.ಅಶೋಕ್, ಸೋಮಶೇಖರ್‌ ಕೆರಗೋಡು, ತಿರುಮಲಾಚಾರಿ, ಎಸ್.ಕೃಷ್ಣಶೆಟ್ಟಿ, ಎಚ್.ಎಸ್.ಚನ್ನಪ್ಪ, ಬಿ.ಲಿಂಗರಾಜು, ಸಿ.ಸುಂದರ, ಬಿ.ಚೌಡಯ್ಯ, ಎಚ್.ಆರ್.ರಮ್ಯ, ಸತ್ಯಸಾವಿತ್ರಿ, ಆರ್.ನಾಗಯ್ಯ, ಕೆ.ರಾಮಲಿಂಗೇಗೌಡ, ವೃತ್ತಿಪರ ನಿರ್ದೇಶಕ ಎಚ್.ಆರ್.ಸುರೇಶ್, ಸಿಇಓ ಜೆ.ಅಶೋಕ ಮತ್ತು ಸಿಬ್ಬಂದಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ