Friday, November 20, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ಗೂಡ್ಸ್ ಆಟೋ ಪಲ್ಟಿಯಾಗಿ ಇಬ್ಬರು ಸಾವು ; 15 ಜನ ಗಾಯ

ಗೂಡ್ಸ್ ಆಟೋ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 15 ಮಂದಿಗೆ ಗಾಯವಾದಂತ ಘಟನೆ ಕೆಆರ್ ಪೇಟೆಯಲ್ಲಿ ನಡೆದಿದೆ.

ಕೆಆರ್ ಪೇಟೆಯ ಹುರುಳಿಗಂಗನಹಳ್ಳಿ ಗ್ರಾಮದ 18ಕ್ಕೂ ಹೆಚ್ಚು ಜನ ಮಂಗಳವಾರ ಗೂಡ್ಸ್ ಆಟೋದಲ್ಲಿ ಹುಬ್ಬನಹಳ್ಳಿ ಗ್ರಾಮದ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನದ ಬಳಿಕ ವಾಪಸ್ ಗ್ರಾಮಕ್ಕೆ ಮರಳುವಾಗ ಈ ಅಪಘಾತ ಸಂಭವಿಸಿದೆ.

ಗೂಡ್ಸ್ ಆಟೋ ವೇಗವಾಗಿ ಬಂದ ಪರಿಣಾಮ ತಿರುವಿನಲ್ಲಿ ಪಲ್ಟಿಯಾಗಿದೆ. ಈ ವೇಳೆ ಅತಿಯಾದ ರಕ್ತ ಸ್ತ್ರಾವದಿಂದ 40 ವರ್ಷದ ಅಂಬುಜ ಹಾಗೂ ಪ್ರತಾಪ್ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಕೆ.ಆರ್ ಪೇಟೆಯ ಟೌನ್ ಠಾಣ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ