Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮನ್ಮುಲ್ ಚುನಾವಣೆ | 8 ಜನರಿಂದ ನಾಮಪತ್ರ ವಾಪಸ್ ; ಅಂತಿಮ ಕಣದಲ್ಲಿ 26 ಅಭ್ಯರ್ಥಿಗಳು

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಎಂಟು ಮಂದಿ ಇಂದು ನಾಮಪತ್ರ ವಾಪಸ್ ಪಡೆದಿದ್ದಾರೆ.

ಮಂಡ್ಯ ತಾಲೂಕಿನಿಂದ ಬಿ. ಚಂದ್ರ, ಜಿ.ಎಸ್. ಪುಷ್ಪಾವತಿ, ಎಚ್.ಎಸ್. ಮಧು ನಾಮಪತ್ರ ವಾಪಸ್ ಪಡೆದಿದ್ದಾರೆ. ಪಾಂಡವಪುರ ತಾಲೂಕಿನಿಂದ ಜಿ.ಇ. ರವಿಕುಮಾರ್, ಮಳವಳ್ಳಿಯಿಂದ ಜಿ.ಎಂ. ವಿಷಕಂಠೇಗೌಡ, ಕೆ.ಆರ್. ಪೇಟೆಯಿಂದ ಎ.ಎಸ್. ಕಲ್ಪನಾ, ಮದ್ದೂರು ತಾಲೂಕಿನಿಂದ ಸಿ. ಚಲುವರಾಜು, ಎಸ್. ಟಿ. ಪ್ರಕಾಶ್ ಗೌಡ ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಮನ್ಮುಲ್ ರಿಟರ್ನಿಂಗ್ ಅಧಿಕಾರಿಯೂ ಆಗಿರುವ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ತಿಳಿಸಿದ್ದಾರೆ.

ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು

ಮಂಡ್ಯ ತಾಲೂಕಿನಿಂದ ಎಂ. ಎಸ್. ರಘುನಂದನ್,ಕೆ. ರಾಜು, ಬಿ.ಆರ್. ರಾಮಚಂದ್ರ, ವಿಜಯಕುಮಾರ್, ಯು.ಸಿ.ಶಿವಕುಮಾರ್ ಕಣದಲ್ಲಿದ್ದಾರೆ.

ಮದ್ದೂರು ತಾಲೂಕಿನಿಂದ ಬಿ. ಅನಿಲ್ ಕುಮಾರ್, ಎಸ್.ಮಹೇಶ, ರಾಮಕೃಷ್ಣ,ಎಂ‌. ರೂಪ, ಎಸ್.ಪಿ.ಸ್ವಾಮಿ, ಎಂ. ಕೆ.ಹರೀಶ್ ಬಾಬು ಕಣದಲ್ಲಿದ್ದಾರೆ.

ಮಳವಳ್ಳಿ ತಾಲೂಕಿನಿಂದ ಡಿ. ಕೃಷ್ಣೇಗೌಡ,ವಿ.ಎಂ. ವಿಶ್ವನಾಥ್, ಪಾಂಡವಪುರ ತಾಲೂಕಿನಿಂದ ಕೆ. ರಾಮಚಂದ್ರ,ಸಿ. ಶಿವಕುಮಾರ್, ಶ್ರೀರಂಗಪಟ್ಟಣದಿಂದ ಎಂ ಕಿಶೋರ್(ಕಿರಣ್), ಎಚ್.ಎಂ. ಪುಟ್ಟಸ್ವಾಮಿಗೌಡ, ಬಿ. ಬೋರೇಗೌಡ, ಕೆ.ಆರ್.ಪೇಟೆ ತಾಲೂಕಿನಿಂದ ಎನ್. ಎಸ್. ಮಹೇಶ, ಎಚ್. ಟಿ. ಮಂಜು, ಕೆ. ರವಿ, ಎಂ.ಬಿ. ಹರೀಶ್ ಹಾಗೂ ನಾಗಮಂಗಲ ತಾಲೂಕಿನಿಂದ ಅಪ್ಪಾಜಿಗೌಡ, ಲಕ್ಷ್ಮಿನಾರಾಯಣ, ದೇವೇಗೌಡ ಹಾಗೂ ನೆಲ್ಲಿಗೆರೆ ಬಾಲು ಕಣದಲ್ಲಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ