Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಶಿಕ್ಷಕರಿಗೆ ಗೌರವ ಸಮರ್ಪಣೆ ; ಹಿರಿಯ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ

ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದ ಎಂ.ವಿ.ಎಂ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಶಾಲೆ ಹಿರಿಯ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕ ಹನಿಯಂಬಾಡಿ ರಾಜು ಅವರಿಗೆ ನಿವೃತ್ತಿಯ ಗೌರವ ಸಮರ್ಪಣೆ ಹಾಗೂ ಹಿರಿಯ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಫೆಬ್ರವರಿ ೨೨ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಕೀಲಾರ ಕೃಷ್ಣೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ನಗರದ ಕರ್ನಾಟಕ ಸಂಘದ ಕೆ.ವಿ.ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಟಿ.ಜವರೇಗೌಡ ವಹಿಸಲಿದ್ದು, ಹನಿಯಂಬಾಡಿ ರಾಜು ಮತ್ತು ದಂಪತಿಯನ್ನು ಮದ್ದೂರು ನಿವೃತ್ತ ಪ್ರಾಂಶುಪಾಲ ಡಾ.ಬಿ.ಕೃಷ್ಣ ಗೌರವಿಸುವರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಅವರು ರಾಜು ಅವರ ಕುರಿತು ಮಾತನಾಡುವರು ಎಂದರು.

ಶಾಲೆಯ ವಿದ್ಯಾರ್ಥಿ ಸಾಧಕರನ್ನು ನಿವೃತ್ತ ಮುಖ್ಯ ಶಿಕ್ಷಕಿ ಡಾ.ಎಂ.ವಿ.ಸರಸ್ವತಿ ಸನ್ಮಾನಿಸುವರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕ ಪ್ರೊ.ವಿ.ಕೆ.ಶಿವಾನಂದ, ಸಮಾಜಮುಖಿ ಚಿಂತಕ ತಗ್ಗಹಳ್ಳಿ ವೆಂಕಟೇಶ್, ಸಾಂಸ್ಕೃತಿಕ ಸಂಘಟಕ ಕಾರಸವಾಡಿ ಮಹದೇವು ಭಾಗವಹಿಸಲಿದ್ದು, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕೆ.ಎಂ.ಕೃಷ್ಣೇಗೌಡ ಕೀಲಾರ ಪ್ರಾಸ್ತವಿಕವಾಗಿ ಮಾತನಾಡುವರು ಎಂದು ವಿವರಿಸಿದರು.

ಶಾಲೆಯ ಹಿರಿಯ ವಿದ್ಯಾರ್ಥಿ ಸಾಧಕರುಗಳಾದ ಬಿ.ಮಾಲತಿ, ಕೆ.ಆರ್.ಶಶಿಧರ ಈಚಗೆರೆ, ಎಲ್.ಉಮಾ, ಹರೀಶ್ ಬಾಣಸವಾಡಿ, ಸುನೀತಮ್ಮ, ಜಿ.ಕೃಷ್ಣೇಗೌಡ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಇದೇ ವೇಳೆ ಹಂಚಿಕೊಂಡರು.

ಗೋಷ್ಠಿಯಲ್ಲಿ ಬಳಗದ ಮಂಗಲ ಲಂಕೇಶ್, ನಂದೀಶ್, ಚಂದ್ರಶೇಖರ್, ರಾಜಶೇಖರ್, ವೈರಮುಡಿ, ಗಿರೀಶ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ