ನಾಡಿನ ಅಶಕ್ತರು ಮತ್ತು ಅಗತ್ಯವಿರುವವರಿಗೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವಾ ಮನೋಭಾವದಿಂದ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಷನ್ ಅನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಮುದ್ದನಘಟ್ಟ ಮಹಾಲಿಂಗೇಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೌಂಡೇಷನ್ ಮುಖಾಂತರ ನಾಡಿನಾದ್ಯಂತ ಇರುವ ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಆಸಕ್ತ, ಅಗತ್ಯವಿರುವವರಿಗೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕವಾಗಿ ನೆರವಾಗಲು “ಅಗತ್ಯವಿರುವವರಿಗೆ ಒಟ್ಟಾಗಿ ಸಹಾಯ ಮಾಡೋಣ” ಎಂಬ ಪರಿಕಲ್ಪನೆಯ ಮೇಲೆ ಅಸ್ತಿತ್ವಕ್ಕೆ ಬಂದಿದೆ. ಫೌಂಡೇಷನ್ ನೆರವನ್ನು ಅಗತ್ಯವಿರುವವರು ಕಛೇರಿಯಲ್ಲಿ ಸಂಪರ್ಕಿಸಿ ಹಾಗೂ ಫೌಂಡೇಷನ್ ಪದಾಧಿಕಾರಿಗಳನ್ನು ಭೇಟಿ ಮಾಡಿ ನೆರವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಫೌಂಡೇಷನ್ ಕಾರ್ಯ ಚಟುವಟಿಕೆಗಳೇನು ?
1)ವಿಶೇಷವಾಗಿ ಗ್ರಾಮೀಣ ಪ್ರದೇಶದ ಆಸಕ್ತ 1000 ಜನಕ್ಕೆ ದ್ವಿಚಕ್ರ ವಾಹನ ಸವಾರರಿಗೆ ಉಚಿತವಾಗಿ ಅಪಘಾತ ಮತ್ತು ಆರೋಗ್ಯ ವಿಮೆ ಮಾಡಿಸುವುದು ಮತ್ತು ಜಾಗೃತಿ ಮೂಡಿಸುವುದು.
2) ಪರಿಸರ ಸಂರಕ್ಷಣೆಗೆ ರಚನಾತ್ಮಕವಾಗಿ ಜಾಗೃತಿ ಮೂಡಿಸುವುದು ಮತ್ತು ಮೊದಲ ಹಂತವಾಗಿ ಒಂದು ಲಕ್ಷ ಸಸಿಗಳನ್ನು ನೆಡಿಸುವ ಕಾರ್ಯಕ್ರಮ ರೂಪಿಸುವುದು.
3)ವಿಶೇಷವಾಗಿ ಗ್ರಾಮೀಣ ಭಾಗದ ಮತ್ತು ನಗರ ಭಾಗದಲ್ಲಿ ಶೈಕ್ಷಣಿಕ ವಿದ್ಯಾಭ್ಯಾಸ ವಂಚಿತ ಮಕ್ಕಳಿಗೆ ನೆರವು ನೀಡಿ ವಿದ್ಯಾಭ್ಯಾಸಕ್ಕೆ ತೊಡಗಿಸುವುದು, ಉಚಿತವಾಗಿ ಶಿಕ್ಷಣ ಕೊಡಿಸುವುದು.
4)ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿದ್ಯಾವಂತ ನಿರುದ್ಯೋಗಿಗಳಿಗೆ ರಾಜ್ಯ, ಹೊರರಾಜ್ಯ ಹೊರದೇಶಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸುವುದು ಮಾಹಿತಿ ನೀಡುವುದು.
5)ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಾಸಿಸಲು ಮನೆ ಇಲ್ಲದ ಆಸಕ್ತ ಅಗತ್ಯ ವಿರುವವರಿಗೆ ಮನೆ ಕಟ್ಟಲು ನೆರವು ನೀಡುವುದು.
6)ವಿಶೇಷವಾಗಿ ವಿಕಲ ಚೇತನರವರಿಗೆ ಮತ್ತು ಆಸಕ್ತ ವಯೋವೃದ್ಧರಿಗೆ ನಿರಾಶ್ರಿತ ಮಕ್ಕಳಿಗೆ ಬದುಕು ಕಲ್ಪಿಸುವುದು.
7)ಗ್ರಾಮೀಣ ಮತ್ತು ನಗರ ಭಾಗದ ಆರೋಗ್ಯವಂಚಿತ ಆಸಕ್ತಕರಿಗೆ ನೆರವು ನೀಡಿ ಜಾಗೃತಿ ಮೂಡಿಸುವುದು ಉಚಿತವಾಗಿ ಔಷಧೋಪಚಾರಗಳನ್ನು ನೀಡುವುದು.
8)ಸಾಂಸ್ಕೃತಿಕವಾಗಿ ಈ ಮಣ್ಣಿನ ಸಂಸ್ಕೃತಿಯನ್ನು ಉಳಿಸುವಲ್ಲಿ ವಿಶೇಷ ಕಾರ್ಯಕ್ರಮವನ್ನು ರೂಪಿಸುವುದು ಜಾಗೃತಿ ಮೂಡಿಸುವುದು.
9)ಆರ್ಥಿಕವಾಗಿ ಹಿಂದುಳಿದ ಕಲಾವಿದರಿಗೆ ಪ್ರೋತ್ಸಾಹಿಸುವುದು ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದು.
10)ಧಾರ್ಮಿಕವಾಗಿ ಜನರ ನಂಬಿಕೆ ಮತ್ತು ಭಾವನೆಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸುವುದು ಆರ್ಥಿಕ ನೆರವು ನೀಡುವುದು.
11)ವಿಶೇಷವಾಗಿ ಗ್ರಾಮೀಣ ಭಾಗದ ರೈತ ಬಂಧುಗಳಿಗೆ ಕೃಷಿಗೆ ಸಂಬಂಧಿಸಿದ ಸಾಂಪ್ರದಾಯಿಕ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಯ ಬಗ್ಗೆ ಅರಿವು ಮೂಡಿಸುವುದು ಮಾದರಿ ಕೃಷಿಕರಿಗೆ ಪ್ರಶಸ್ತಿಗಳನ್ನು ನೀಡುವುದು ಆ ಮೂಖ್ಯೇನ ಗ್ರಾಮೀಣ ಭಾಗದ ಕೃಷಿ ವಿಮುಖ ಯುವಕರನ್ನು ಜನರನ್ನು ಕೃಷಿಗೆ ತೊಡಗಿಸುವ ಕಾರ್ಯಕ್ರಮ ರೂಪಿಸುವುದು. ಕೃಷಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ನಿಖರ ಮಾಹಿತಿಯನ್ನು ನೀಡುವುದು ಆಸಕ್ತ ಅಗತ್ಯ ಇರುವ ರೈತರಿಗೆ ಉಪಕರಣಗಳನ್ನು ಉಚಿತವಾಗಿ ನೀಡುವುದು.
12) ಆಸಕ್ತ ಅಗತ್ಯವಿರುವವರಿಗೆ ಉಚಿತ ಕಾನೂನು ನೆರವು ನೀಡುವುದು.
13) ನಗರ ಮತ್ತು ಗ್ರಾಮೀಣ ಪ್ರದೇಶಗಳ ಸಾರ್ವಜನಿಕರ ಹಿತಾಸಕ್ತಿಗಳಿಗೆ ಸಂಬಂಧಪಟ್ಟಂತೆ ದಾವೇ ಗಳಿಗೆ ನ್ಯಾಯಾಲಯಗಳಲ್ಲಿ ಉಚಿತ ನೆರವು ನೀಡುವುದು.
14) ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ಜಾಗೃತಿ ಮತ್ತು ಪ್ರೇರೇಪಣ ಶಿಬಿರ ಗಳನ್ನು ಏರ್ಪಡಿಸುವುದು ನೆರವು ನೀಡುವುದು.
15) ಸಾಮಾಜಿಕವಾಗಿ ತುಳಿತಕೊಳಗಾದ ಧಮನಿತರಿಗೆ ಪ್ರೇರೇಪಿಸಿ, ಪ್ರೋತ್ಸಾಹಿಸುವುದು
16) ನಗರ ಮತ್ತು ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ವಉದ್ಯೋಗ ಕೈಗೊಳ್ಳಲು ಉದ್ಯಮಗಳನ್ನು ಸ್ಥಾಪಿಸಲು ನೆರವು ಮಾಹಿತಿ ನೀಡಲು ಕಾರ್ಯಕ್ರಮ ರೂಪಿಸುವುದು.
ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು “ಅಗತ್ಯವಿರುವವರಿಗೆ ಒಟ್ಟಾಗಿ ಸಹಾಯ ಮಾಡೋಣ” ಎಂಬ ಪರಿಕಲ್ಪನೆ ಮೇಲೆ ಈ ಫೌಂಡೇಶನ್ ಮುಖಾಂತರ ಅನುಷ್ಠಾನಗೊಳಿಸಲಾಗುವುದು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಫೌಂಡೇಷನ್ ಖಜಾಂಚಿ ಶಶಿಕುಮಾರ್, ಸಂಯೋಜನ ಕಾರ್ಯದರ್ಶಿ ಮೋಹನ್, ಸದಸ್ಯರಾದ ಅನಿಲ್ಗೌಡ ಹಾಗೂ ಶ್ರೀನಿವಾಸ್ ಇದ್ದರು.




