ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಗ್ರಾ.ಪಂಗೆ ನೂತನ ಅಧ್ಯಕ್ಷರಾಗಿ ಕೆ.ಎನ್.ಶಿವಲಿಂಗಯ್ಯ ಅವರು ಆಯ್ಕೆಗೊಂಡ ಹಿನ್ನೆಲೆಯಲ್ಲಿ ಮಂಡ್ಯ ವಿವಿ ನಿವೃತ್ತ ಉಪಕುಲಪತಿ ಪ್ರೊ.ಕೆ.ಎನ್.ನಿಂಗೇಗೌಡ ಅವರನ್ನು ಕುರಿಕೆಂಪನದೊಡ್ಡಿ ಗ್ರಾಮದಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ.ಕೆ.ಎನ್.ನಿಂಗೇಗೌಡ ಅವರು ಮಾತನಾಡಿ, ದೊಡ್ಡರಸಿನಕೆರೆ ಗ್ರಾಮಪಂಚಾಯಿತಿ ಒಂದು ವಿಶಿಷ್ಟವಾದಂತಹ ಪಂಚಾಯಿತಿಯಾಗಿದ್ದು ಈ ಪಂಚಾಯಿತಿಯಲ್ಲಿ ಅಂಬರೀಶ್ ಅವರು ಕೇಂದ್ರಸಚಿವರಾಗಿ, ಡಿ.ಸಿ.ತಮ್ಮಣ್ಣ ಅವರು ರಾಜ್ಯ ಸಚಿವರಾಗಿ ಉತ್ತಮಾಗಿ ಸೇವೆಸಲ್ಲಿಸಿದ್ದಾರೆ. ನಮ್ಮ ಗ್ರಾಮದಿಂದ ಶಿವಲಿಂಗಯ್ಯ ಅವರು ಇಂದು ಗ್ರಾ.ಪಂಗೆ ಅಧ್ಯಕ್ಷರಾಗಿ ಅಧಿಕಾರ ಹಿಡಿದಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ. ಇವರು 5 ಗ್ರಾಮಗಳಲ್ಲೂ ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಿ ಪಂಚಾತಿಯನ್ನು ಅಭಿವೃದ್ದಿ ಪಡಿಬೇಕೆಂಬುವುದು ನಮ್ಮ ಆಶಯ ಎಂದರು.
ನೂತನ ಅಧ್ಯಕ್ಷ ಕೆ.ಎನ್.ಶಿವಲಿಂಗಯ್ಯ ಮಾತನಾಡಿ, ನಮ್ಮ ಗ್ರಾಮದ ರಸ್ತೆಗಳನ್ನು ನರೇಗ ಯೋಜನೆಯಡಿಯಲ್ಲಿ ಅಭಿವೃದ್ದಿ ಪಡಿಸಲು ಪ್ರೊ.ಕೆ.ಎನ್.ನಿಂಗೇಗೌಡ ಸಹಕಾರ ದೊಡ್ಡಮಟ್ಟದಲ್ಲಿದೆ. ಇವರು ಹೆಚ್.ಡಿ.ಕುಮಾರಸ್ವಾಮಿ ಸಕರ್ಾರದಲ್ಲಿ ಉನ್ನತ ಶಿಕ್ಷಣ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಸೇವೆಸಲ್ಲಿಸಿದ್ದಾರೆ. ಮತ್ತು ಮಂಡ್ಯ ವಿಶ್ವವಿದ್ಯಾನಿಲಯವನ್ನು ಅಭಿವೃದ್ದಿ ಪಡಿಸುವಲ್ಲಿ ಮುಂದಾಗಿದ್ದರು ಎಂದರು.
ಜೊತೆಗೆ ನಮ್ಮ ಗ್ರಾಮದ ಅಭಿವೃದ್ದಿಗೆ ಬೆಂಬಲವಾಗಿ ನಿಂತಿದ್ದಾರೆ. ಹಾಗಾಗಿ ಇವರನ್ನು ಗ್ರಾಮದ ಪರವಾಗಿ ಅಭಿನಂದಿಸಿ ಗೌರವಿಸಲಾಗುತ್ತಿದೆ ಎಂದರು.
ಗ್ರಾಮದ ಜೆಡಿಎಸ್ ಮುಖಂಡ ಶಿವಲಿಂಗೇಗೌಡ (ತೈಲಪ್ಪ) ಮಾತನಾಡಿ, ಕುರಿಕೆಂಪನದೊಡ್ಡಿ ಗ್ರಾಮದ ಅಭಿವೃದ್ದಿ ಬಹಳಷ್ಟು ಸಹಕಾರ ನೀಡುತ್ತಾ ಬಂದಿರುವ ನಿಂಗೇಗೌಡ ಅವರು ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ದಿಗೆ ಮತ್ತಷ್ಟು ಶ್ರಮಿಸಲಿ ಎಂದು ಕೋರಿದರು.
ಇದೇ ವೇಳೆನೂತನ ಅಧ್ಯಕ್ಷ ಕೆ.ಎನ್.ಶಿವಲಿಂಗಯ್ಯ ಅವರನ್ನು ಬುಧವಾರ ಸಂಜೆ 4.30 ಗಂಟೆಯಲ್ಲಿ ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಸ್.ರಾಜಣ್ಣ, ಸವಿತಕೃಷ್ಣ, ವಿಷಕಂಠೇಗೌಡ, ಕೆ.ಎಲ್.ಅಕರ್ೇಶ್, ಕೆ.ಎನ್.ಶೇಖರ್, ಕೆ.ಟಿ.ಅಕರ್ೇಶ್, ಹನುಮಂತು, ಬಿಳಿಯಯ್ಯ, ಪುಟ್ಟಸ್ವಾಮಿ, ರಾಮಲಿಂಗಯ್ಯ, ತಮ್ಮಯ್ಯ, ಟಿ.ಎಂ.ಸುಧಾ, ನಾಗಮಣಿ, ಕರೀಗೌಡ, ಕೆಂಪರಾಜು ಸೇರಿದಂತೆ ಹಲವರಿದ್ದರು.




