ಉತ್ತರಾಖಂಡ ರಾಜ್ಯದಲ್ಲಿ ನಡೆಯಲಿರುವ 38ನೇ ರಾಷ್ಟ್ರೀಯ ಟ್ರಯಥ್ಲಾನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಮಂಡ್ಯದ ಯುವ ಕ್ರೀಡಾಪಟು ಭರತ್ ದ್ಯಾವಪ್ಪ (20) ಆಯ್ಕೆಯಾಗಿದ್ದಾರೆ.
ಜನವರಿ 26 ರಿಂದ 30 ರವರೆಗೆ ಉತ್ತರಾಖಂಡದ ಹಲ್ದ್ವಾನಿಯ ಐಜಿಐ ಕ್ರೀಡಾಂಗಣದಲ್ಲಿ ನಡೆಯಲಿರುವ 38 ನೇ ರಾಷ್ಟ್ರೀಯ ಟ್ರಯಥ್ಲಾನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಮಂಡ್ಯದ ಭರತ್ ದ್ಯಾವಪ್ಪ ಅರ್ಹತೆ ಪಡೆದಿದ್ದಾರೆ.
ಟ್ರಯಥ್ಲಾನ್ ಸ್ವಿಮ್ಮಿಂಗ್, ರನ್ನಿಂಗ್ ಹಾಗೂ ಸೈಕ್ಲಿಂಗ್ ಕ್ರೀಡೆಗಳನ್ನು ಒಳಗೊಂಡಿದ್ದು, ಇದರಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ನಿರ್ದಿಷ್ಟ ಸಮಯದಲ್ಲಿ ಮೂರು ಕ್ರೀಡೆಗಳನ್ನು ಪಾಲ್ಗೊಂಡು ಗುರಿ ಮುಟ್ಟಬೇಕು. ಭರತ್ ದ್ಯಾವಪ್ಪ ಪುರುಷರ ವಿಭಾಗದ ಮಿಶ್ರ ರಿಲೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ.
ಟ್ರಯಥ್ಲಾನ್ ಕ್ರೀಡೆಯಲ್ಲಿ ರಾಜ್ಯದಲ್ಲಿ 2 ನೇ ರ್ಯಾಂಕಿಂಗ್ ಹಾಗೂ ರಾಷ್ಟ್ರಮಟ್ಟದಲ್ಲಿ 14ನೇ ರ್ಯಾಂಕಿಂಕ್ ನಲ್ಲಿರುವ ಭರತ್ ದ್ಯಾವಪ್ಪ, ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಪಟ್ಟದಲ್ಲಿ ಹಲವು ಸ್ಪರ್ಧೆಗಳನ್ನು ಭಾಗವಹಿಸಿದ್ದು, ಉತ್ತಮ ಸಾಧನೆ ಮಾಡಿದ್ದಾರೆ. ಭರತ್ ದ್ಯಾವಪ್ಪ ಮಂಡ್ಯ ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ ಅವರ ಪುತ್ರರಾಗಿದ್ದಾರೆ.




