Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ನಗರದ ರಸ್ತೆಗಳ ಅಭಿವೃದ್ದಿಗೆ ₹13 ಕೋಟಿ : ರವಿಕುಮಾರ್

ಮಂಡ್ಯ ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳ ಅಭಿವೃದ್ದಿಗೆ 13 ಕೋಟಿ ರೂಪಾಯಿಗಳ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಸದ್ಯದಲ್ಲೇ 3 ಕೋಟಿ ರೂ. ವೆಚ್ಚದಲ್ಲಿ ಕನ್ನಿಕಾ ಪರಮೇಶ್ವರಿ ದೇವಾಲಯದಿಂದ, ಗೌರಿ ಶಂಕರ ಕಲ್ಯಾಣ ಮಂಟಪದವರೆಗೆ ರಸ್ತೆ ಅಭಿವೃದ್ದಿ ಹಾಗೂ ಫುಟ್ ಪಾತ್ ಕಾಮಗಾರಿ ಚಾಲನೆ ನೀಡಲಾಗುವುದು ಎಂದು ಮಂಡ್ಯ ಶಾಸಕ ರವಿಕುಮಾರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, 10 ಕೋಟಿ ರೂ. ವೆಚ್ಚದಲ್ಲಿ ನಗರ ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ದಿಗೆ ಯೋಜನೆ ಸಿದ್ದಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ನಗರದ ಸೌಂದರ್ಯ ಹೆಚ್ಚಿಸಲು ರಸ್ತೆ ವಿಭಜಕಗಳ ಮಧ್ಯೆ ಹೂವಿನ ಗಿಡ ಬೆಳೆಸಲಾಗುವುದು ಎಂದು ತಿಳಿಸಿದರು.

ಡೆಲ್ಟ್ ಸಹಯೋಗದಲ್ಲಿ ಫುಟ್ ಪಾತ್ ಹಾಗೂ ವಿದ್ಯುದ್ದೀಕರಣ
ನಗರದ ಮಹಾವೀರ ವೃತ್ತದಿಂದ ಹೊಸಹಳ್ಳಿ ವೃತ್ತ ಮತ್ತು ಡಾ.ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಕನ್ನಿಕಾ ಪರಮೇಶ್ವರಿ ದೇವಾಲಯ ವೃತ್ತದ ವರೆಗಿನ ಫುಟ್ ಪಾತ್ ಅಭಿವೃದ್ದಿ ಮತ್ತು ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಗೆ ತಲಾ 4 ಕೋಟಿಯಂತೆ ನಗರ ಭೂ ಸಾರಿಗೆ ಯೋಜನೆ (ಡೆಲ್ಟ್) ವತಿಯಿಂದ ಶೇ.60ರಷ್ಟು ಹಾಗೂ ನಗರಸಭೆ ವತಿಯಿಂದ ಶೇ.40ರಷ್ಟು ಅನುದಾನ ಬಳಕೆ ಮಾಡಿ 8 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ದಿಗೊಳಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಆಸ್ತಿ ರಕ್ಷಣೆಗೆ ಕ್ರಮ
ಮಂಡ್ಯ ನಗರಸಭೆಗೆ ಸೇರಿದ ಆಸ್ತಿಗಳ ರಕ್ಷಣೆಗೆ 10 ಮಂದಿ ಸದಸ್ಯರು ಹಾಗೂ ಅಧಿಕಾರಿಗಳ ತಂಡ ರಚಿಸಿದ್ದು, ನಗರಸಭೆ ಆಸ್ತಿ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಮೂರು ತಿಂಗಳ ಗಡುವು ನೀಡಲಾಗಿದೆ ಎಂದು ತಿಳಿಸಿದರು.

ಜನವಸತಿ ಪ್ರದೇಶ ಸೇರ್ಪಡೆಗೆ ಚಿಂತನೆ
ನಗರ ವ್ಯಾಪ್ತಿಯ ಗಡಿ ಪ್ರದೇಶಗಳಾದ ದ್ವಾರಕನಗರ, ಶಂಕರಪ್ಪ ಲೇಔಟ್, ಶ್ರೀರಾಮನಗರ, ಮಂಡ್ಯ ಕೆರೆ ಅಂಗಳ ಸೇರಿದಂತೆ ಇತರೆ ಜನ ವಸತಿ ಪ್ರದೇಶಗಳನ್ನು ಮಂಡ್ಯನಗರ ವ್ಯಾಪ್ತಿಗೆ ತರಲು ಹಲವು ಕಾನೂನು ತೊಡಕುಗಳಿದ್ದು, ಅವುಗಳನ್ನು ನಿವಾರಿಸಿ, ಸಂಬಂಧಿಸಿದ ಶಾಸಕರ ಸಲಹೆಯಂತೆ ಬೃಹತ್ ಮಂಡ್ಯ ವ್ಯಾಪ್ತಿಗೆ ತರುವ ಚಿಂತನೆ ನನ್ನದಾಗಿದೆ ಎಂದು ತಿಳಿಸಿದರು.

ಕ್ರಮ ಅನಿವಾರ್ಯ
ನಗರಸಭೆ ಕಾರ್ಯಾಲಯದ ಅಧಿಕಾರಿಗಳು ಹಾಗೂ ನೌಕರರು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ವಿಳಂಬ ನೀತಿ ಅನುಸರಿಸುವ ಬಗ್ಗೆ ಸಾರ್ವಜನಿಕ ದೂರುಗಳಿದ್ದು, ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ವಿಳಂಬ ಪ್ರವೃತ್ತಿ ಮುಂದುವರಿದರೆ ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ