ಮಂಡ್ಯ ತಾಲೂಕಿನ ಮಾಡ್ಲ ಗ್ರಾಮದಲ್ಲಿ ಬಳಿ ಚಿರತೆ ಸೆರೆಯಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಕಳೆದ 15 ದಿನಗಳಿಂದ ಈ ಭಾಗದ ಸುತ್ತಮುತ್ತಲ ಗ್ರಾಮದಲ್ಲಿ ಚಿರತೆ ಉಪಟಳ ಹೆಚ್ಚಾಗಿತ್ತು. ಚಿರತೆ ಉಪಟಳದ ದೂರಿನ ಮೇರೆಗೆ ಅರಣ್ಯದ ಇಲಾಖೆ ಸಿಬ್ಬಂದಿ ಬೋನು ಇಟ್ಟಿದ್ದರು. ಸೋಮವಾರ ರಾತ್ರಿ ಬೋನಿನಲ್ಲಿ ಇಟ್ಟಿದ್ದ ನಾಯಿ ತಿನ್ನಲು ಬಂದು ಚಿರತೆ ಸೆರೆಯಾಗಿದೆ. ಬೋನಿನಲ್ಲಿ ಸೆರೆ ಸಿಕ್ಕ ಚಿರತೆ ನೋಡಲು ಜನ ಮುಗಿಬಿದ್ದು ಕೆಲಕಾಲ ಗದ್ದಲ ಸೃಷ್ಟಿಸಿದರು.
ಬೋನಿಗೆ ಬಿದ್ದಿರುವ ಚಿರತೆಯನ್ನು ಅರಣ್ಯಕ್ಕೆ ಬಿಡಲು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಕ್ರಮ ವಹಿಸಿದ್ದಾರೆ.
ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಸುತ್ತಮುತ್ತಲ ಗ್ರಾಮಗಳ ಜನರು, ಚಿರತೆ ಮರಿಗಳು ತಪ್ಪಿಸಿಕೊಂಡಿದ್ದು ಅವುಗಳನ್ನು ರಕ್ಷಿಸಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.




