ಮದ್ದೂರು ತಾಲ್ಲೂಕಿನ ಕೂಳಗೆರೆ ಗ್ರಾಮ ಪಂಚಾಯಿತಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಹಣ ವಂಚನೆ ಮಾಡಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಲಾಗಿ ಇಂದು ಮದ್ದೂರು ತಾಲ್ಲೂಕು ಎ.ಡಿ ಮತ್ತು ಕಾರ್ಯಪಾಲಕರು ಕೂಳಗೆರೆ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮಸ್ಥರ ಸಮ್ಮುಖದಲ್ಲಿ ದಾಖಲೆಗಳನ್ನು ಪರಿಶೀಲಿಸಿ ವರದಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ಮಂಡ್ಯ ಜಿಲ್ಲಾಧ್ಯಕ್ಷ ಡಿ.ಜಿ ನಾಗರಾಜ್, ಉಪಾಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಕೆ.ಜೆ ಮಹೇಶ್ ಕೂಳಗೆರೆ, ಮಂಡ್ಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರಮೋದ ಎಸ್, ಕಾರ್ಯದರ್ಶಿ ದೀಪಿಕಾ, ಮದ್ದೂರು ತಾಲ್ಲೂಕು ಅಧ್ಯಕ್ಷ ಮಹದೇವ, ಕಾರ್ಯದರ್ಶಿ ರಾಚಯ್ಯ, ಮಂಡ್ಯ ತಾಲ್ಲೂಕು ಅಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಮಲ್ಲಯ್ಯ, ಮಳವಳ್ಳಿ ಪ್ರಧಾನ ಕಾರ್ಯದರ್ಶಿ ಮಹಾದೇವಸ್ವಾಮಿ ಹೆಚ್.ಎಂ, ಕಾರ್ಯದರ್ಶಿ ಸಿದ್ದರಾಜು, ಹಾಗೂ ಕೂಳಗೆರೆ, ಅರೆಕಲ್ಲುದೊಡ್ಡಿ, ಅರುವನಹಳ್ಳಿ, ಅಂಕೇಗೌಡನದೊಡ್ಡಿ, ಅರೆತಿಪ್ಪೂರು, ಕೆಂಪೇಗೌಡನದೊಡ್ಡಿ, ಕೊತ್ತಿಪುರ, ಅಣ್ಣಳ್ಳಿದೊಡ್ಡಿ, ಗ್ರಾಮಸ್ಥರು ಭಾಗಿಯಾಗಿದ್ದರು.




