Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಿ.ಸಿ.ಫಾರಂನಲ್ಲಿ ಸಿರಿಧಾನ್ಯಗಳ ಪಾಕ ಸ್ಪರ್ಧೆ ಯಶಸ್ವಿ

ಐ.ಸಿ.ಎ.ಆರ್.ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಮಂಡ್ಯ ತಾಲ್ಲೂಕಿನ ವಿ.ಸಿ.ಫಾರಂ ನಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ “ಸಿರಿಧಾನ್ಯಗಳ ಪಾಕ ಸ್ಪರ್ಧೆ” ನಡೆಯಿತು.

ಗಾಣದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2023 ಸಿರಿಧಾನ್ಯಗಳ ವರ್ಷ ಆಗಿರುವುದರಿಂದ ಸಿರಿಧಾನ್ಯಗಳ ಬೆಳೆ ಮತ್ತು ಆಹಾರದ ಮಹತ್ವವನ್ನು ವಿವರಿಸಿದರು.

ವಲಯ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎನ್.ಶಿವಕುಮಾರ್‌ ಮಾತನಾಡಿ, ಸಿರಿಧಾನ್ಯಗಳು ಹವಾಮಾನ ವೈಪರೀತ್ಯಗಳನ್ನು ಎದುರಿಸಿ ಬೆಳೆಯಬಲ್ಲ ಬೆಳೆಗಳಾಗಿರುವುದರಿಂದ ಈ ಬೆಳೆಗಳಿಗೆ ಒತ್ತು ನೀಡಿ, ಬೆಳೆದು ದಿನನಿತ್ಯ ಆಹಾರದಲ್ಲಿ ಉಪಯೋಗಿಸಿದಾಗ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದಡಾ. ಎನ್.ಟಿ. ನರೇಶ್‌ ಮಾತನಾಡಿ ಕೃಷಿ ವಿಜ್ಞಾನ ಕೇಂದ್ರದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಚಂಪ ಕುಮಾರಿ ಮಾತಾನಾಡಿ, ಇಲಾಖೆ ಯಲ್ಲಿದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿದರು .

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಕಮಲಾಬಾಯಿ ಕೂಡಗಿ ಮಾತಾನಾಡಿ, ಸಿರಿಧಾನ್ಯಗಳ ಪೌಷ್ಟಿಕ ಮಹತ್ವ ಮತ್ತು ಔಷಧೀಯ ಗುಣಗಳು, ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಸಿರಿಧಾನ್ಯಗಳ ಖಾದ್ಯಗಳನ್ನು ಮಹಿಳೆಯರಿಂದ ಪ್ರದರ್ಶಿಸಲಾ ಯಿತು. ಪ್ರದರ್ಶಿಸಿದ ಸಿರಿಧಾನ್ಯ ಖಾದ್ಯಗಳನ್ನು ಡಾ.ಚಂದ್ರಕಲಾ ಹಣಗಿ (ಪೌಷ್ಟಿಕ ತಜ್ಜೆ), ಡಾ. ಅತೀಫ ಮುನವ್ವರಿ, ಮತ್ತು ಅಪೂರ್ವ, ಸರಿತಾ ಅವರು ಮೌಲ್ಯಾಂಕನ ಮಾಡಿ ಉತ್ತಮ ಖಾದ್ಯ ಪ್ರದರ್ಶನ ಮಾಡಿದವರಿಗೆ ಪ್ರಶಸ್ತಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ 86 ರೈತ ಹಾಗೂ ರೈತ ಮಹಿಳೆಯರು, ವಿಸ್ತರಣಾ ಕಾರ್ಯಕರ್ತರು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ