Friday, November 20, 2026

ಪ್ರಾಯೋಗಿಕ ಆವೃತ್ತಿ

ಕರ್ನಾಟಕ ಬಂದ್ : ಪ್ರಗತಿಪರ ಸಂಘಟನೆಗಳ ಒಕ್ಕೂಟ ಬೆಂಬಲ ನಾಳೆ ಮದ್ದೂರು ಬಂದ್

ಮದ್ದೂರು : ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿ ಕನ್ನಡ ಚಳುವಳಿಯ ವಾಟಾಳ್ ನಾಗರಾಜ್ ಕರೆ ನೀಡಿರುವ ಮಾರ್ಚ್ 22 ರ ಕರ್ನಾಟಕ ಬಂದ್ ಗೆ ಮದ್ದೂರಿನ ಪ್ರಗತಿಪರ ಸಂಘಟನೆ ಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದ್ದು ಮದ್ದೂರು ಬಂದ್ ಗೆ ಕರೆ ನೀಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಚನ್ನಸಂದ್ರ ‌ಲಕ್ಷ್ಮಣ್ ಅವರು ಕನ್ನಡದ ಅಸ್ಮಿತೆ ಯ ಉಳಿವಿಗಾಗಿ ಕರೆ ನೀಡಿರುವ ಮದ್ದೂರು ಬಂದ್ ಗೆ ಪಟ್ಟಣದ ವರ್ತಕರು ಬೀದಿ ಬದಿ ವ್ಯಾಪಾರಿಗಳು ಹೊಟೆಲ್ ಮತ್ತು ಬೇಕರಿ ಮಾಲೀಕರು ಒಂದು ದಿನದ ವಹಿವಾಟು ಸ್ಥಗಿತಗೊಳಿಸಿ‌ ಸಹಕರಿಸುವಂತೆ ಮನವಿ ಮಾಡಿದರು.

ದೇಶ ಹಳ್ಳಿ ಬೋರಣ್ಣ ಹಾಗೂ ಕನ್ನಡ ಪರ ಹೋರಾಟಗಾರ ಮ.ನ. ಪ್ರಸನ್ನ ಅವರು ಇದು ಸ್ವಯಂ ಪ್ರೇರಿತ ಬಂದ್ ಆಗಿದ್ದು ಎಲ್ಲಾ ಕನ್ನಡ ಅಭಿಮಾನಿಗಳು ಈ ಬಂದ್ ನಲ್ಲಿ ಸ್ವ ಪ್ರೇರಣೆಯಿಂದ ಭಾಗವಹಿಸಬೇಕು‌ ಎಂದು ತಿಳಿಸಿದ್ದಾರೆ.

ತೆಂಗು ಬೆಳೆಗಾರರ ಸಂಘ, ಮಹಿಳಾ ಮತ್ತು ಮಕ್ಕಳ‌ದ್ವನಿ ಸಂಸ್ಥೆ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಆಟೋ ಚಾಲಕರ ಸಂಘ, ದಲಿತ ಸಂಘಟನೆ ,ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಬಂದ್ ಗೆ ಕರೆ ನೀಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ