Thursday, November 19, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ಅಮೂಲ್ಯ ಪುತ್ರ ರತ್ನರನ್ನ ನೀಡಿದ ಹೊನ್ನೇನಹಳ್ಳಿ ಲಿಂಗಪ್ಪ

ವರದಿ : ನ.ಲಿ.ಕೃಷ್ಣ.

ಹೊನ್ನೇನಹಳ್ಳಿ ಲಿಂಗಪ್ಪ ಅವರ ನಿಧನಕ್ಕೆ ಮದ್ದೂರು ತಾ ಅಖಿಲಕರ್ನಾಟಕ ಒಕ್ಕಲಿಗರ ಸಂಘ ಶ್ರದ್ದಾಂಜಲಿ ಸಭೆ ನಡೆಸಿತು.

ಮದ್ದೂರಿನ ಸಂಘದ ಕಛೇರಿಯಲ್ಲಿ ಇಂದು ಸಂಜೆ ನಡೆದ ಸಂತಾಪ ಸಭೆಯಲ್ಲಿ ಶ್ರೀಯುತರ ಗುಣಗಾನ ಮಾಡಲಾಯಿತು.

ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಯವರ ಪೂರ್ವಶ್ರಮದ ತೀರ್ಥರೂಪರಾದ ಲಿಂಗಪ್ಪರವರು
ಅಮೂಲ್ಯ ಪುತ್ರ ರತ್ನವನ್ನು ನಾಡಿಗೆ ಅರ್ಪಿಸಿದ ಹಿರಿಮೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಚಂದೂಪುರ ಶಿವಲಿಂಗೇಗೌಡ ಅವರು ಅಭಿಪ್ರಾಯ ಪಟ್ಟರು.

ಸಭೆಯಲ್ಲಿ ಸಂಘದ ಕಾರ್ಯದರ್ಶಿ ಹಾಗಹಳ್ಳಿ ಬಸವರಾಜ್ ನಿವೃತ್ತ ಶಿಕ್ಷಕರಾದ ಉಪ್ಪಿನಕೆರೆ ನಾಗರಾಜು ನ.ಲಿ.ಕೃಷ್ಣ ದೇಶಹಳ್ಳಿ ಬೊರಣ್ಣ ಚಂದ್ರು ತಗಡಯ್ಯ ಬ್ಯಾಡರಹಳ್ಳಿ ಶಿವಕುಮಾರ್ ಅಪ್ಪಾಜಿ ಮತ್ತಿತರರು ಭಾಗವಹಿಸಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ