ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೃಷಿ ಕವಚ ಕಾರ್ಯಕ್ರಮದಡಿ ಕೃಷಿ ಇಲಾಖೆಯ ಯೋಜನೆಗಳ ಒಗ್ಗೂಡಿತ ಕಂದಕ ಬದು ನಿರ್ಮಾಣ ಕುರಿತ ಕಾರ್ಯಾಗಾರವು ಮಾರ್ಚ್ 24 ರಂದು ಬೆಳಿಗ್ಗೆ 10 ಗಂಟೆಗೆ ಮಂಡ್ಯನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ನವದೆಹಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಬೆಲ್ಲದನಾಡು ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಇವರ ಸಹಯೋಗದಲ್ಲಿ ಕಾರ್ಯಾಗಾರ ನಡೆಯಲಿದೆ.
ಆಹಾರ, ಪೌಷ್ಠಿಕ ಭದ್ರತೆ ಹಾಗೂ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆ ವ್ಯಾಪ್ತಿಯ ಫಲಾನುಭವಿಗಳಿಗೆ ಕಂದಕ ಬದುಗಳನ್ನು ನಿರ್ಮಾಣ ಮಾಡುವುದು. ಮಣ್ಣಿನ ಫಲವತ್ತತೆ ಕಾಪಾಡುವುದು, ಮಣ್ಣಿನ ಸವಕಳಿ ತಪ್ಪಿಸುವುದು, ನೀರು ಮತ್ತು ಮಣ್ಣಿನ ಸಂರಕ್ಷಣೆ, ಉತ್ಪಾದಕತೆ ಹೆಚ್ಚಳ, ಗುಣಮಟ್ಟದ ಉತ್ಪನ್ನ, ಮೌಲ್ಯವರ್ಧನೆ, ರೈತ ಉತ್ಪಾದಕ ಸಂಸ್ಥೆಗಳ ಮುಖಾಂತರ ಸಂಸ್ಕರಣೆ, ಮೌಲ್ಯ ವರ್ಧನೆ ಮಾಡಿ ಮಾರಾಟ ಮಾಡುವುದು ಕಾರ್ಯಗಾರದ ಪ್ರಮುಖ ಉದ್ದೇಶವಾಗಿದೆ.
2025-26 ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಣ್ಣು ಮತ್ತು ನೀರು ಸಂರಕ್ಷಣೆ ಕೈಗೊಳ್ಳುವ ಬದು ನಿರ್ಮಾಣ ಕಾಮಗಾರಿಯನ್ನು ಆಹಾರ, ಪೌಷ್ಠಿಕ ಭದ್ರತೆ ಹಾಗೂ ರಾಷ್ಟ್ರೀಯ ಖಾದ್ಯತೈಲ ಅಭಿಯಾನ ಯೋಜನೆ ಒಗ್ಗೂಡಿಸಿ ಕೃಷಿ ಪ್ರದೇಶದಲ್ಲಿ ನ್ಯೂಟ್ರಿ ಸಿರಿಧಾನ್ಯ-ರಾಗಿ, ದ್ವಿದಳದಾನ್ಯ-ಅಲಸಂದೆ ಮತ್ತು ಎಣ್ಣೆಕಾಳು-ಎಳ್ಳು ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಇಳುವರಿ ಹೆಚ್ಚಳಮಾಡಿ ರೈತರ ಆರ್ಥಿಕಮಟ್ಟ ಸುಧಾರಿಸಲು ಯೋಜನೆಯ ಪ್ರಾತ್ಯಕ್ಷಿಕೆ ತಾಕುಗಳಲ್ಲಿ ಕಂದಕ ಬದು ನಿರ್ಮಾಣವನ್ನು ಬದು ಸಂಜೀವಿನಿ ಕಾರ್ಯಕ್ರಮವನ್ನು ವಿನೂತನವಾಗಿ “2 ವರ್ಷದ ಸಮಗ್ರತಾ ದೃಷ್ಟಿಯ ಬದು ಸಂಜೀವಿನಿ ಅಭಿಯಾನ” (ಕೃಷಿ ಕವಚ ಮಾದರಿ) ಅನುಷ್ಠಾನವನ್ನು ಸಹ ಮಾಡಲಾಗುತ್ತಿದೆ.




