ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಕಾಳಪ್ಪ ಬಡಾವಣೆಯ ನೂರಾರು ಜನರು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ವಿಶೇಷವಾಗಿ ಗೌರವ ಸಮರ್ಪಣೆ ಮಾಡಿದರು.
ಆರ್ ಟಿ ಓ ಕಛೇರಿ ಮುಂಭಾಗದಲ್ಲಿರುವ ಕಾಳಪ್ಪ ಬಡಾವಣೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಸಂಭ್ರಮ ಮನೆ ಮಾಡಿತ್ತು.
ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಬಡಾವಣೆಯ ಭೀಮರಾವ್ ಬಾಯ್ಸ್ ಸಂಘಟನೆಯ ನೂರಾರು ಜನರು ಜಮಾವಣೆಗೊಂಡು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಿಂದಾಬಾದ್,ಅಂಬೇಡ್ಕರ್ ಅವರ ಆಶಯ ಈಡೇರಿಸೋಣ,ಅಂಬೇಡ್ಕರ್ ಅವರ ದಾರಿಯಲ್ಲಿ ಸಾಗೋಣ ಎಂದು ಘೋಷಣೆ ಕೂಗುತ್ತಾ ನಗಾರಿ ಬಾರಿಸುತ್ತಾ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ಜೈ ಜೈ ಜೈ ಭೀಮ್ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.ಮಕ್ಕಳು, ಯುವಕರು ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ಸಂಕಲ್ಪ ಮಾಡಿದರು.
ಕಾಳಪ್ಪ ಬಡಾವಣೆಯ ಮುಖಂಡರಾದ ಆರ್ಮುಗಂ ಸಿದ್ದರಾಜು, ಸುಬ್ರಹ್ಮಣ್ಯ, ಅದಿತ್ಯಾ, ನಾಗೇಶ್, ಸುಂದರ್,ಮಹದೇವ,ಕುಮಾರ, ಶ್ರೀನಿವಾಸ್,ಹರೀಶ್,ಮಂಜುನಾಥ್,ಅಂಜಲಿ,ಸಹನ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.