Friday, November 20, 2026

ಪ್ರಾಯೋಗಿಕ ಆವೃತ್ತಿ

ಬೆಂಗಳೂರು| ನಾಳೆ ‘ಈದಿನ’ ಓದುಗರ ಸಮಾವೇಶ ; ವಿಶೇಷ ಸಂಚಿಕೆ ಬಿಡುಗಡೆ ಮಾಡಲಿರುವ ಸಿಎಂ ಸಿದ್ದರಾಮಯ್ಯ

ಡಿಜಿಟಲ್ ಮಾಧ್ಯಮ ಸಂಸ್ಥೆಯಾದ ಈ ದಿನ.ಕಾಂ ಓದುಗರ ಸಮಾವೇಶವು ನ.30 ರಂದು ಬೆಳಗ್ಗೆ 10.30 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಈದಿನ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡುವರು.

ಮುಖ್ಯ ಅತಿಥಿಗಳಾಗಿ ನವದೆಹಲಿ ದಿ ವೈರ್ ಸಂಪಾದಕರಾದ ಸೀಮಾ ಚಿಸ್ತಿ, ಚಂಬಲ್ ಮೀಡಿಯಾ(ಖಬರ್ ಲೆಹರಿಯಾ) ನಿರ್ದೇಶಕಿ ಪ್ರಿಯಾ ತುವಸ್ಸೆರಿ ಭಾಗವಹಿಸುವರು.

‘ಕರ್ನಾಟಕ 50; ನಡೆದ ಹೆಜ್ಜೆ- ಮುಂದಿನ ದಿಕ್ಕು’ ಕುರಿತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎ ನಾರಾಯಣ ವಿಶೇಷ ಉಪನ್ಯಾಸ ನೀಡುವರು. ಅಕ್ಕಮಹಾದೇವಿ ವಿಶ್ವ ವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಸಬೀಹಾ ಭೂಮಿಗೌಡ ಅಧ್ಯಕ್ಷತೆ ವಹಿಸುವರು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಈದಿನ.ಕಾಮ್ ಕನ್ಸಲೆಂಟ್ ಎಡಿಟರ್ ಡಿ ಉಮಾಪತಿ,  ಈದಿನ ಸಂಪಾದಕ ಬಸವರಾಜು ಮೇಗಲಕೇರಿ ಉಪಸ್ಥಿತರಿರುವರು. ಓದುಗ ಪ್ರತಿನಿಧಿಗಳಾಗಿ ಎನ್ ಇಂದಿರಮ್ಮ ತುಮಕೂರು, ವಿಶ್ವ ನಾಟೇಕರ್ ಯಾದಗಿರಿ, ಭುವನೇಶ್ವರಿ ಕಾಂಬ್ಳೆ ವಿಜಯಪುರ, ಅಸಾದುಲ್ಲಾ ಮೈಸೂರು,  ಸುಶೀಲಾ ನಾಡ ಕುಂದಾಪುರ ಹಾಗೂ ಸಿ ಜಿ ಪಾಟೀಲ್ ಧಾರವಾಡ ಭಾಗವಹಿಸುವರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ