Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಧರ್ಮಸ್ಥಳದ ಸೌಜನ್ಯ ನ್ಯಾಯಕ್ಕಾಗಿ ಏ.4ರಂದು ಉಪವಾಸ ಸತ್ಯಾಗ್ರಹ

ಕಳೆದ 12 ವರ್ಷಗಳಿಂದ ನ್ಯಾಯದಿಂದ ವಂಚಿತಳಾಗಿರುವ ರೈತ ಪುತ್ರಿ ಧರ್ಮಸ್ಥಳದ ಸೌಜನ್ಯಳಿಗೆ ನ್ಯಾಯ ದೊರಕಿಸಿ ಅವಳ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಮಂಡ್ಯ ಜಿಲ್ಲಾ ರೈತ ಸಂಘವು ಏ.4ರಂದು ಮಂಡ್ಯದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡಿದೆ.

ಈಗಾಗಲೇ ಹೈಕೋರ್ಟ್ ಅಪರಾಧಿಯನ್ನು ದೋಷ ಮುಕ್ತಗೊಳಿಸಿದೆ. ಹಾಗಾದರೆ ನಿಜವಾದ ಆರೋಪಿ ಯಾರು?
ಕೃತ್ಯ ನಡೆದ ಸಮಯದಲ್ಲಿ ಸರಿಯಾಗಿ ಸಾಕ್ಷ್ಯಾಧಾರ ಕಲೆ ಹಾಕದೆ, ನಿಜವಾದ ಆರೋಪಿಯನ್ನು ಹುಡುಕುವಲ್ಲಿ ಕರ್ತವ್ಯ ಲೋಪವೆಸಗಿರುವ ಪೊಲೀಸ್ ಅಧಿಕಾರಿಗಳು, ಸಿಐಡಿ ಅಧಿಕಾರಿಗಳು ಹಾಗೂ ಸಿಬಿಐ ಅಧಿಕಾರಿಗಳನ್ನು ವಶಕ್ಕೆ ಪಡೆದು ಬ್ರೈನ್ ಮ್ಯಾಪಿಂಗ್ ಮಾಡಿ ಸತ್ಯಾಸತ್ಯತೆಯನ್ನು ಹೊರತಂದು, ನಿಜವಾದ ಅಪರಾಧಿಗಳನ್ನು ಗುರುತಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ರೈತಸಂಘ ಅಗ್ರಹಿಸಿದೆ.

ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ, ಸಾಕ್ಷ್ಯವನ್ನು ತಿರುಚುವ ಅಧಿಕಾರಿಗಳಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು, ಸಾಕ್ಷ್ಯವನ್ನು ತಿರುಚಿದ ಅಧಿಕಾರಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ರೈತಸಂಘ ಒತ್ತಾಯಿಸಿದೆ. ಈ ಹೋರಾಟದಲ್ಲಿ ಸೌಜನ್ಯ ಪರ ಹೋರಾಟಗಾರ, ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿರುವ ಗಿರೀಶ್ ಮಟ್ಟಣ್ಣನವರ್ ಕೂಡ ಪ್ರಮುಖರಾಗಿ ಭಾಗವಹಿಸಲಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ