ಮಂಡ್ಯ ನಗರದಲ್ಲಿ ಸಂಸದರ ಅನುದಾನದಡಿ ಹೈಟೆಕ್ ಆಟೋ ನಿಲ್ದಾಣ ನಿರ್ಮಿಸುವುದಾಗಿ ಆಟೋ ಚಾಲಕರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಮಂಡ್ಯನಗರದ ಅಂಬೇಡ್ಕರ್ ಭವನದ ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ನಗರದ ಬಸ್ ನಿಲ್ದಾಣದ ಬಳಿ ಕುಮಾರಸ್ವಾಮಿ ಅವರನ್ನು ಆಟೋ ಚಾಲಕರು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಆಟೋ ಚಾಲಕರು ಮಳೆ ಬಂದಾಗ, ಬಿಸಿಲು ಹೆಚ್ಚಿದ್ದಾಗ ಆಟೋದಲ್ಲಿಯೇ ಕೂರಬೇಕು. ಆದ್ದರಿಂದ ಒಂದು ಸುಸಜ್ಜಿತವಾದ ನಿಲ್ದಾಣ ಇದ್ದರೆ ಮಳೆ,ಬಿಸಿಲಿನಿಂದ ರಕ್ಷಣೆ ದೊರಕಲಿದೆ ಎಂದು ಸಚಿವರಿಗೆ ಮನವಿ ಮಾಡಿದರು.
ಆಟೋ ಚಾಲಕರ ಮನವಿಗೆ ಸ್ಪಂದಿಸಿದ ಸಚಿವರು, ಮಳೆ, ಬಿಸಿಲಿಗೆ ರಕ್ಷಣೆ ನೀಡುವಂತಹ ವಿಶಾಲವಾದ, ಅತ್ಯಾಧುನಿಕ, ಹೈಟೆಕ್ ಮಾದರಿಯ ಆಟೋ ನಿಲ್ದಾಣವನ್ನು ನಿರ್ಮಿಸಿಕೊಡುವುದಾಗಿ ತಿಳಿಸಿ,
ನಾಳೆಯಿಂದಲೇ ಆಟೋ ನಿಲ್ದಾಣ ನಿರ್ಮಾಣಕ್ಕೆ ಸಂಸದರ ಅನುದಾನದಲ್ಲಿ ಹಣ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.




