Sunday, November 22, 2026

ಪ್ರಾಯೋಗಿಕ ಆವೃತ್ತಿ

ಸರ್ಕಾರಿ ಉಪಕರಣಗಾರ ತರಬೇತಿ ಕೇಂದ್ರದಲ್ಲಿ ಹೊಸ ಕೋರ್ಸ್ : ಶಿವಕುಮಾರ್

ಮದ್ದೂರು ತಾಲ್ಲೂಕಿನ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ ೨೦೨೫-೨೬ನೇ ಸಾಲಿನ ಪ್ರವೇಶ ಆರಂಭಗೊಂಡಿದ್ದು, ನೂತನವಾಗಿ ಎರಡು ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ ಎಂದು ಕೇಂದ್ರದ ಪ್ರಾಂಶುಪಾಲ ಶಿವಕುಮಾರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಇದುವರೆಗೂ ಡಿಪ್ಲೋಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್ ಕೋರ್ಸ್ ನಡೆಸಲಾಗುತ್ತಿದ್ದು, ಇದೀಗ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಅಟೋಮೇಷನ್ ಮತ್ತು ರೋಬೋಟಿಕ್ಸ್ ಕೋರ್ಸ್‌ಗಳನ್ನು ನೂತನವಾಗಿ ಪರಿಚಯಿಸಿದೆ ಎಂದರು.

ಕೇಂದ್ರದಲ್ಲಿನ ಎಲ್ಲ ಕೋರ್ಸ್‌ಗಳಿಗೆ ಹತ್ತನೇ ತರಗತಿ ಉತ್ತೀರ್ಣರಾದರು ನಾಲ್ಕು ವರ್ಷ ಮತ್ತು ದ್ವಿತೀಯ ಪಿಯುಸಿ, ಐಟಿಐ ಉತ್ತೀರ್ಣರಾದವರು 3 ವರ್ಷಕ್ಕೆ ಪ್ರವೇಶ ಪಡೆಯಬಹುದಾಗಿದೆ. ಆಸಕ್ತಿ ಉಳ್ಳವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ ಕಾಲೇಜಿನಲ್ಲಿ ನೇರವಾಗಿ ಅರ್ಜಿ ಪಡೆದು ಸಲ್ಲಿಸಬಹುದಾಗಿತ್ತು. ಆದರೆ ಈಗ ವ್ಯವಸ್ಥೆ ಆನ್‌ಲೈನ್‌ಗೆ ಬದಲಿಸಲಾಗಿದೆ ಎಂದು ಹೇಳಿದರು.

ಕೋರ್ಸ್‌ನ ಮೊದಲ ವರ್ಷಕ್ಕೆ ೩೩,೨೦೦ ರೂ. ಎರಡನೇ ವರ್ಷಕ್ಕೆ ೨೬,೦೦೦, ಮೂರನೇ ವರ್ಷಕ್ಕೆ ೨೬,೦೦೦ ಮತ್ತು ನಾಲ್ಕನೆ ವರ್ಷಕ್ಕೆ ೧೧,೦೦೦ ರೂ ಶುಲ್ಕವಿದ್ದು, ಮೊದಲ ಮೂರು ವರ್ಷಗಳು ವಿದ್ಯಾರ್ಥಿ ವೇತನದ ಮೂಲಕ ಹಿಂಪಡೆಯಲು ಅವಕಾಶ ಇರುತ್ತದೆ ಎಂದು ಇದೇ ವೇಳೆ ತಿಳಿಸಿದರು.

ಗೋಷ್ಠಿಯಲ್ಲಿ ಉಪನ್ಯಾಸಕರಾದ ನರೇಂದ್ರಬಾಬು, ಶರತ್‌ರಾಜ್ ಅರಸ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ