Sunday, November 22, 2026

ಪ್ರಾಯೋಗಿಕ ಆವೃತ್ತಿ

ಬಾನು ಮುಷ್ತಾಕ್ ಕಥೆಗಳಲ್ಲಿ ಮಹಿಳಾ ಸಂವೇದನೆ ಎದ್ದು ಕಾಣುತ್ತದೆ : ಪ್ರೊ. ಪ್ರಸನ್ನಕುಮಾರ್

ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕರ ಕಥೆಗಳಲ್ಲಿ ಮಹಿಳಾ ಸಂವೇದನೆ ಹಾಗೂ ಮುಸಲ್ಮಾನ ಸಮುದಾಯದ ಹೆಣ್ಣು ಮಕ್ಕಳ ಅಸಹಾಯಕತೆ ಜನಪರ ಕಾಳಜಿ ಎದ್ದು ಕಾಣುತ್ತದೆ. ಬಾನು ಮುಷ್ತಾಕ್ ಅವರು ಕೇವಲ ಬರಹಗಾರ್ತಿ ಅಲ್ಲದೆ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಂತು ಹೋರಾಟ ಮಾಡುವ ಮತ್ತು ನ್ಯಾಯ ದೊರಕಿಸಿಕೊಡುವಲ್ಲಿ ವಕೀಲರಾಗಿಯೂ ನಿಂತು ಕೆಲಸ ಮಾಡುವ ಕಾರಣದಿಂದಾಗಿ ಅವರ ಬಗ್ಗೆ ಹೆಮ್ಮೆ ಅನಿಸುತ್ತದೆ ಎಂದು ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಪ್ರಸನ್ನಕುಮಾರ್ ಕೆರಗೋಡು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಮಂಡ್ಯದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಘಟಕ -1 ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿ ನಿಲಯದ ಆವರಣದಲ್ಲಿ ನಡೆದ “ಚಕೋರ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ರವರ ಕೃತಿ ಎದೆಯ ಹಣತೆಯ ಬಗ್ಗೆ ಮಾತನಾಡಿದ ಅವರು, ಬಾನು ಮುಷ್ಟಾಕ್ ಅವರು ಬರೆದಿರುವ ಹಸೀನಾ ಮತ್ತು ಇತರ ಕಥೆಗಳು ಕೃತಿಯಿಂದ ಆಯ್ದ ಎರಡು ಕಥೆಗಳನ್ನು ಉದಾಹರಿಸುತ್ತ ವಿಮರ್ಶಾತ್ಮಕ ದೃಷ್ಟಿಯಿಂದ ಉಪನ್ಯಾಸ ನೀಡುವ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸುಜಾತ ಎಚ್ಆರ್ ಮಾತನಾಡಿ ಕನ್ನಡದ ಮೂಲಕೃತಿಗೆ ಅಂತರಾಷ್ಟ್ರೀಯ ಮನ್ನಣೆ ದೊರೆತಿರುವುದು ಬಹಳ ಹೆಮ್ಮೆಯ ಸಂಗತಿ. ಇಡೀ ರಾಜ್ಯದಾದ್ಯಂತ ಅಕಾಡೆಮಿಯ ವತಿಯಿಂದ ಬಾನು ಮುಷ್ತಾಕ್ ಅವರ ಈ ಕೃತಿಯ ಬಗೆಗೆ ಸಂವಾದ ಹಾಗೂ ಚರ್ಚೆ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಮಂಡ್ಯ ಜಿಲ್ಲಾ ಸಹ ಸಂಚಾಲಕರಾದ ಲೇಖಕಿ ಭವಾನಿ ಲೋಕೇಶ್ ಅವರು ಬಾನು ಮುಷ್ತಾಕ್ ಅವರ ಎದೆಯ ಅಳತೆ ಕಥೆಯನ್ನು ವಾಚನ ಮಾಡಿದರು.

ನಿಲಯ ಪಾಲಕರಾದ ಯೋಗಿತಾ ಅವರು ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಇವತ್ತಿನ ಯುವ ಜನತೆಗೆ ಸ್ಪೂರ್ತಿ ತುಂಬುತ್ತಿದೆ ಎನ್ನುತ್ತಾ ಅಕಾಡೆಮಿಯ ಕೆಲಸವನ್ನು ಶ್ಲಾಘಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ