Friday, November 20, 2026

ಪ್ರಾಯೋಗಿಕ ಆವೃತ್ತಿ

ಷಡ್ಯಂತ್ರಕ್ಕೆ ಮಣಿದ ಸರ್ಕಾರದಿಂದ ಜಾತಿಗಣತಿ ಜಾರಿಗೆ ಹಿಂದೇಟು : ವೆಂಕಟಗಿರಿಯಯ್ಯ

ರಾಜ್ಯದಲ್ಲಿ ಜಾತಿಗಣತಿ ಮಾಡಿಸಿ, ಬಿಡುಗಡೆ ಮಾಡಿ ಜಾರಿಗೊಳಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ವಿರೋಧಿಸುವ ಜಾತಿವಾದಿ ಷಡ್ಯಂತ್ರಕ್ಕೆ ಮಣಿದು ಜನವಿರೋಧಿ ನಡವಳಿಕೆ ತೋರುತ್ತಿದ್ದಾರೆ ಎಂದು ಕದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಖಂಡನೆ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಬಾರಿ ಅಧಿಕಾರಕ್ಕೆ ಬಂದರೂ ಕೋಟ್ಯಾಂತರ ರೂ. ಜನತೆಯ ಹಣ ವ್ಯಯಮಾಡಿ, ಜಾತಿಗಣತಿ ಮಾಡಿಯೂ, ಬಿಡುಗಡೆ ಮಾಡಿ ಮೀಸಲಾತಿ ಜಾರಿಗೊಳಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಣೆಗೇಡಿತನ ಪ್ರದರ್ಶಿಸುತ್ತಿದ್ದಾರೆಂದರು.

೨೦೧೫ರಲ್ಲಿಯೂ ೧೬೭ ಕೋಟಿ ರೂ ಹಣ ವ್ಯಯ ಮಾಡಿ ಜಾತಿಗಣತಿ ಮಾಡಿಸಿದ್ದರೂ ವರದಿಯನ್ನು ಬಿಡುಗಡೆ ಮಾಡಲಿಲ್ಲ, ಈಗ ಹತ್ತು ವರ್ಷಗಳ ನಂತರ ಬಿಡುಗಡೆ ಮಾಡುವಂತಿಲ್ಲ ಎಂದು ಹೇಳಿರುವ ಅವರ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿ ಸಹಿ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.

ಕೆಲವು ರಾಜಕೀಯ ಜಾತಿವಾದಿಗಳ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮೂರು ತಿಂಗಳಲ್ಲಿ ಜಾತಿಗಣತಿ ಮರು ಸಮೀಕ್ಷೆಗೆ ನಿರ್ದೇಶನ ನೀಡಿದ್ದು, ವಾಸ್ತವಿಕತೆಗೆ ವಿರುದ್ದವಾಗಿದೆ. ಸದರಿ ನಿರ್ದೇಶನ ಜಾರಿಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ಶೋಷಿತ, ಅಹಿಂದ ಸಮುದಾಯಕ್ಕೆ ಘೋರ ಅನ್ಯಾಯವೆಸಗಲಿದೆ ಎಂದು ಕಿಡಿಕಾರಿದರು.

ಹೈಕಮಾಂಡ್ ಆದೇಶಕ್ಕೆ ಮಣಿದು, ಜಾತಿಗಣತಿ ಮರುಸಮೀಕ್ಷೆಗೆ ಮುಂದಾದ ರಾಜ್ಯ ಸಚಿವ ಸಂಪುಟದ ತೀರ್ಮಾನ ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಜನವಿರೋಧಿ ನಡೆಯಾಗಿದೆ. ಅಲ್ಲದೇ ಅಹಿಂದ ಸಮುದಾಯಗಳಿಗೆ ಶೇ.೭೫ರಷ್ಟು ಮೀಸಲಾತಿ ನೀತಿ ಜಾರಿಯನ್ನು ಮುಂದೂಡುವ ಮೂಲಕ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಮನುವಾದಿತನವು ಸಾಮಾಜಿಕ ನ್ಯಾಯ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಿ.ಆನಂದ್, ಮಹಿಳಾ ಜಿಲ್ಲಾಧ್ಯಕ್ಷೆ ಸುಶ್ಮಿತ ಆನಂದ್, ತಾಲ್ಲೂಕು ಅಧ್ಯಕ್ಷ ಮುತ್ತುರಾಜ್, ಮಹದೇವು, ತಮ್ಮಣ್ಣ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ