ಮಂಡ್ಯ ಜಿಲ್ಲೆಯಾದ್ಯಂತ ಆಹಾರ ನಿಗಮದ ಕೆಎಫ್‌ಸಿಎಸ್‌ಸಿ ಹಾಗೂ ಟಿಎಪಿಸಿಎಂಸ್ ಗೋದಾಮುಗಲ್ಲಿ, ಆಹಾರ ಧಾನ್ಯಗಳ ಎತುವಳಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಸರ್ಕಾರ ಬಾಕಿ ಉಳಿಸಿಕೊಂಡಿರುವ ಇಎಸ್ಐ, ಪಿಎಫ್ ಹಣ ಪಾವತಿಸುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಶ್ರಮಿಕ ಶಕ್ತಿ ಸಂಘಟಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
2018 ರಿಂದ 2022ರ ಅವಧಿಯಲ್ಲಿ ಕೆ.ಎಸ್.ವಿಜಯ್ ಕುಮಾರ್ ಶ್ರೀನಿವಾಸ ಟ್ರಾನ್ಸ್ ಪೋರ್ಟ್ ಮಳವಳ್ಳಿ, ಮದ್ದೂರು ಮತ್ತು ಕೆ.ಆರ್ ಪೇಟ್, ಕೆ.ನಟರಾಜ್ ದುರ್ಗಾಪ್ರಸಾದ್ ಟ್ರಾನ್ಸ್ ಪೋರ್ಟ್ ನಾಗಮಂಗಲ, ಹೆಚ್.ಎಂ ಪ್ರಕಾಶ್ ಲಕ್ಷ್ಮೀ ವೆಂಕಟೇಶ್ವರ ಟ್ರಾನ್ಸ್ ಪೋರ್ಟ್ ಪಾಂಡವಪುರ ಚಿಲ್ಲರೇ ಸಾಗಾಣಿಕೆ ಗುತ್ತಿಗೆದಾರರು ಸಾಗಾಣಿಕೆ ಕೆಲಸ ನಿರ್ವಹಿಸಿದ್ದು ಅಂದಿನ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ ಆಹಾರ/ಲೆಶಾ/ಗ್ರಾ.ಸಾ.ಟೆಂ/18//2018-19, ದಿನಾಂಕ 21-09-2019, ESI ಮತ್ತು PF ಪಾವತಿ ಬಾಕಿ ಉಳಿಸಿಕೊಂಡಿದ್ದು ಇನ್ನೂ ಪಾವತಿ ಮಾಡಿಲ್ಲ. ಹಾಗಾಗಿ ಇವರ ಇಎಂಡಿ ಹಣ ಮತ್ತು ಸಾಗಾಣಿಕೆ ಬಿಲ್ ಪಾವತಿ ತಡೆಹಿಡಿಯಲು ಈ ಹಿಂದೆ ತಮ್ಮ ಕಛೇರಿಗೆ ಅರ್ಜಿ ನೀಡಿದ್ದೇವೆ. 2022-2024ರ ಸಾಲಿನಲ್ಲಿ ಕೆ.ಎಸ್ ವಿಜಯ್‌ಕುಮಾರ್. ಶ್ರೀನಿವಾಸ ಟ್ರಾನ್ಸ್‌ಪೋರ್ಟ್ ಮಳವಳ್ಳಿ ಮತ್ತು ಕೆ.ಆರ್ ಪೇಟೆ, ಕೆ.ನಟರಾಜು ದುರ್ಗಾಪ್ರಸಾದ್ ಟ್ರಾನ್ಸ್ ಪೋರ್ಟ್ ನಾಗಮಂಗಲ ಮತ್ತು ಪಾಂಡವಪುರ ಇ0ವರು ಈ ಅವಧಿಯ ESI ಮತ್ತು PF ಪಾವತಿ ಮಾಡಿಲ್ಲ ಎಂದು ದೂರಿದರು.
ಚಿಲ್ಲರೇ ಸಾಗಾಣಿಕೆ ಗುತ್ತಿಗೆದಾರರು ಗುತ್ತಿಗೆ ಕಾರ್ಮಿಕ ಕಾಯ್ದೆ 1970ರ ಪ್ರಕಾರ ಯಾವುದೇ ನಿಯಮಾವಳಿಗಳ ಪಾಲಿಸುತ್ತಿಲ್ಲ, ಸರಿಯಾದ ಸಮಯಕ್ಕೆ, ಸಂಬಳ (ಕೂಲಿ) ಪಾವತಿ (WAGE SLIP) ನೀಡುತ್ತಿಲ್ಲ, ಹಾಗಾಗಿ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸರಿಯಾಗಿ ಸಂಬಳ ಪಾವತಿಸಲು ಕ್ರಮವಹಿಸಬೇಕು ಹಾಗೂ ಪ್ರತಿ ತಿಂಗಳು ಸಂಬಳ ನೀಡಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಆಯುಕ್ತರ ಆದೇಶದ ಮೇರೆಗೆ ತಮ್ಮ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮತಿಯ ಸಭೆಯನ್ನು ತಕ್ಷಣವೇ ನಡೆಸಿ ಮುಂದೆ ಕನಿಷ್ಠ 6 ತಿಂಗಳಿಗೊಮ್ಮೆ ಸಭೆ ಕರೆಯಬೇಕು. ಈ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಿ ಸೂಕ್ತ ಪರಿಹಾರ ಕ್ರಮವಹಿಸಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶ್ರಮಿಕ ಶಕ್ತಿ ಅಧ್ಯಕ್ಷ ವರದರಾಜೇಂದ್ರ, ದೇವರಾಜು, ನರಸಿಂಹ ಎನ್, ತಮ್ಮನಾಯಕ, ವಿನೋದ್ ಪಾಂಡವಪುರ, ಮಹೇಶ್ ನಾಗಮಂಗಲ, ಮತ್ತಯ್ಯ, ಮಹದೇವ ಮಳವಳ್ಳಿ ಮತ್ತಿತರರು ಭಾಗವಹಿಸಿದ್ದರು.




