Friday, November 20, 2026

ಪ್ರಾಯೋಗಿಕ ಆವೃತ್ತಿ

ಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯದ ಅಭಿವೃದ್ಧಿ ಹೇಗೆ ಸಾಧ್ಯ? ; ಜು.5 ಕ್ಕೆ ವಿಚಾರ ಸಂಕಿರಣ

ಜಾಗೃತ ಕರ್ನಾಟಕ ಮಂಡ್ಯ ಘಟಕದ ವತಿಯಿಂದ ‘ಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯದ ಅಭಿವೃದ್ಧಿ ಹೇಗೆ ಸಾಧ್ಯ?’ ಎಂಬುದರ ಕುರಿತು ಜು.5ರಂದು ಬೆಳಿಗ್ಗೆ 10.30 ರಿಂದ ಸಂಜೆ 4.30 ರವರೆಗೆ ಮಂಡ್ಯನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯಲಿದೆ.

ಈ ಚರ್ಚೆ ಏಕೆ? ಎಂಬುವುದರ ಕುರಿತು ಪೃಥ್ವಿರಾಜ್ ಬೊಪ್ಪಸಮುದ್ರ ಮಾತನಾಡುವರು. ಜಾಗೃತ ಕರ್ನಾಟಕದ ಕುರಿತು ಡಾ.ಬಿ.ಸಿ.ಬಸವರಾಜು ಮಾತನಾಡುವರು. ‘ಮಂಡ್ಯ ಜಿಲ್ಲೆಯ ಬಿಕ್ಕಟ್ಟುಗಳು’ ಜಾಗೃತ ಕರ್ನಾಟಕದ ಸಂಚಾಲಕ ಡಾ. ವಾಸು ಎಚ್ ವಿ ಪ್ರಸ್ತಾಪಿಸುವರು. ಜಗದೀಶ್ ನಗರಕೆರೆ ಅಧ್ಯಕ್ಷತೆ ವಹಿಸುವರು. ಪ್ರಜ್ವಲ್ ನಾಗಮಂಗಲ ನಿರ್ವಹಣೆ ಮಾಡುವರು.

ಮೊದಲ ಗೋಷ್ಠಿಯಲ್ಲಿ ‘ಕೃಷಿ ಪ್ರಧಾನವಾದ, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಯುಳ್ಳ ಪ್ರದೇಶದಲ್ಲಿ ಸುಸ್ಥಿರ ಆದಾಯ ವೃದ್ಧಿಗೆ ಇರುವ ಸಾಧ್ಯತೆಗಳು’ ಕುರಿತು ಆಶಾ ಕಿಸಾನ್ ಸ್ವರಾಜ್ ವೇದಿಕೆಯ ಕವಿತಾ ಕುರಗಂಟಿ ವಿಚಾರ ಮಂಡನೆ ಮಾಡುವರು. ಜಾಗೃತ ಕರ್ನಾಟಕ ಮಂಡ್ಯ ಘಟಕದ ಮುಖಂಡ ಸಂತೋಷ್ ಜಿ ಅಧ್ಯಕ್ಷತೆ ವಹಿಸುವರು. ನಾಗೇಶ್ ನಿರ್ವಹಣೆ ಮಾಡುವರು.

ಎರಡನೇ ಗೋಷ್ಠಿಯಲ್ಲಿ ‘ಮಂಡ್ಯ ಜಿಲ್ಲೆ ಮತ್ತು ಕೃಷಿಗೆ ಇರುವ ಕೆಲವು ಸಾಧ್ಯತೆಗಳು’ ಕುರಿತು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿಚಾರ ಮಂಡನೆ ಮಾಡುವರು. ರೈತ ಮುಖಂಡರಾದ ನಂದಿನಿ ಜಯರಾಂ ಅಧ್ಯಕ್ಷತೆ ವಹಿಸುವರು. ಸುಬ್ರಮಣ್ಯ ನಿರ್ವಹಣೆ ಮಾಡುವರು.

ಆಸಕ್ತರು ವಿಚಾರ ಸಂಕಿರಣದಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 4.30 ರವರೆಗೆ ಕಡ್ಡಾಯವಾಗಿ ಹಾಜರಿರುವಂತೆ ತಿಳಿಸಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ