ಮಂಡ್ಯ ತಾಲ್ಲೂಕಿನ ಕೊಡಗಹಳ್ಳಿ ಗ್ರಾಮದ ಬಳಿ ಇರುವ ಸುಮಾರು 50ಕ್ಕೂ ಹೆಚ್ಚು ಎಕರೆಯಲ್ಲಿದ್ದ ವಿವಿಧ ಜಾತಿಯ ಮರಗಳಾದ ರಕ್ತ ಚಂದನ, ಶ್ರೀಗಂಧ, ನೀಲಗಿರಿ, ಬೇವು, ಅರ್ಕುಲೆಸ್ ಮರಗಳನ್ನು ಕಡಿದು ನಾಶ ಮಾಡಿರುವುದನ್ನು ಖಂಡಿಸಿ ಹಾಗೂ ಗೋಮಾಳದ ಉಳಿವಿಗೆ ಆಗ್ರಹಿಸಿ ಮಂಡ್ಯ ತಹಶೀಲ್ದಾರ್ ಕಚೇರಿ ಎದುರು ರೈತರು ಹಾಗೂ ಗ್ರಾಮಸ್ಥರು ಗುರುವಾರ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಗೋಮಾಳ ಜಾಗದಲ್ಲಿದ್ದ ಸಾವಿರಾರು ಮರಗಳ ಮಾರಣ ಹೋಮ ಮಾಡಲಾಗಿದೆ ಎಂದು ತಹಶೀಲ್ದಾರ್ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರಲ್ಲದ ನಾಲ್ವರಿಗೆ ಭೂಮಿ ಮಂಜೂರು ಮಾಡಲಾಗಿದೆ. ಸರ್ಕಾರಿ ಭೂಮಿಯನ್ನು ಭೂಗಳ್ಳರಿಗೆ ನೀಡುತ್ತಿದ್ದಾರೆ. 16 ಎಕರೆ ಅಕ್ರಮ ಸ್ವತ್ತು, 60 ಎಕರೆ ಅರಣ್ಯ ಪ್ರದೇಶವನ್ನು ನಾಶ ಮಾಡಿದ್ದಾರೆ.
ತಕ್ಷಣವೇ ಭೂಗಳ್ಳರಿಗೆ ಭೂಮಿವುದನ್ನು ತಡೆ ಹಿಡಿಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನ್ಯಾಯವಾದಿ ಬಿ.ಟಿ.ವಿಶ್ವನಾಥ್, ಕರವೇ ಹೆಚ್.ಡಿ.ಜಯರಾಂ, ಕೆ.ಆರ್.ರವೀಂದ್ರ ಸೇರಿದಂತೆ ನೂರಾರು ರೈತರು, ಗ್ರಾಮಸ್ಥರು ಭಾಗವವಹಿಸಿದ್ದರು.




