Tuesday, November 24, 2026

ಪ್ರಾಯೋಗಿಕ ಆವೃತ್ತಿ

ನಿಖಿಲ್ ಕುಮಾರಸ್ವಾಮಿ ಲಾಟರಿ ಹೇಳಿಕೆಗೆ ‘ಕೈ’ ಮುಖಂಡರ ಖಂಡನೆ

ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಜಿಲ್ಲೆಯ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರು ಅವರು ಶಾಸಕ ರವಿಕುಮಾರ್‌ಗೌಡ ಅವರ ವಿರುದ್ಧ ಅವಹೇಳನಕಾರಿ ಮಾತನಾಡಿರುವುದು ಖಂಡನಾರ್ಹ ಎಂದು ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಹೆಚ್.ಕೆ.ರುದ್ರಪ್ಪ ಆಕ್ಷೇಪ ವ್ಯಕ್ತಪಡಿಸಿದರು.

ಮಂಡ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ತಮ್ಮ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಮಂಡ್ಯ ಕ್ಷೇತ್ರದ ಶಾಸಕರ ಬಗ್ಗೆ ಲಘುವಾಗಿ ಮಾತನಾಡಿ, ಲಾಟರಿಯಲ್ಲಿ ಗೆದ್ದರು ಎಂಬ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.

ನಿಖಿಲ್ ಅವರ ತಾತ ಹೆಚ್.ಡಿ.ದೇವೇಗೌಡರು ೧೬ ಲೋಕಸಭಾ ಸ್ಥಾನಗಳನ್ನು ಗೆದ್ದು ಪ್ರಧಾನಿಯಾದರು, ಅವರ ತಂದೆ ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ಮಾಡಿಕೊಂಡು ಎರಡು ಬಾರಿ ಮುಖ್ಯಮಂತ್ರಿಗಳಾದರು. ಶಾಸಕ ರವಿಕುಮಾರ್‌ಗೌಡ ಅವರು ೨೦೧೮ರಲ್ಲಿ ಸೋತು ಹತಾಷೆಗೊಳ್ಳದೆ ನಿರಂತರ ಜನವಸೇವೆ ಮಾಡಿ, ೨೦೨೩ರ ಚುನಾವಣೆಯಲ್ಲಿ ಕ್ಷೇತ್ರದ ಜನರ ಮತದಾನದ ಋಣದಲ್ಲಿ ಗೆಲುವು ಸಾಧಿಸಿದ್ದಾರೆ ಎಂದರು.

ತಂದೆ ಮುಖ್ಯಮಂತ್ರಿಯಾಗಿದ್ದು, ತಾತ ಮಾಜಿ ಪ್ರಧಾನಿಗಳಾಗಿದ್ದರು. ಜಿಲ್ಲೆಯಲ್ಲಿ ಕಣ್ಣೀರಿಟ್ಟು ಮತ ಕೇಳಿದರೂ ನಿಖಿಲ್ ಮಂಡ್ಯದಲ್ಲಿ ಗೆಲ್ಲಲಿಲ್ಲ. ಪಕ್ಷೇತರ ಅಭ್ಯರ್ಥಿ ಸ್ಪರ್ಧಿಯು ಘಟಾನುಘಟಿಗಳ ಹಿನ್ನಲೆಯಿರುವ ಕುಟುಂಬದ ವಿರುದ್ದ ಸಾವಾಲೋಡ್ಡಿ ಸ್ಪರ್ಧಿಸಿದ್ದವರ ವಿರುದ್ಧ ಸೋತಿದ್ದೀರಿ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಮುಖಂಡ ಶಿವನಂಜು ಮಾತನಾಡಿ, ಮಂಡ್ಯ ಶಾಸಕರು ೨೦೧೮ರಲ್ಲಿ ಸೋತರೂ ಕೋವಿಡ್ ಸಂದರ್ಭದಲ್ಲಿ ಜನಸೇವೆ ಮಾಡಿ, ರೈತರ ತರಕಾರಿ ಮಾರಾಟಕ್ಕೆ ಸಹಾಯ ಮಾಡಿದ್ದಲ್ಲದೆ. ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನೆರವು ನೀಡುವ ಮೂಲಕ ಜನಮನ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದೇ ಹೊರತು ನಿಮ್ಮಂತೆ ಅದೃಷ್ಟದಲ್ಲಿ ಗೆದ್ದವರಲ್ಲ ಎಂದು ಛೇಡಿಸಿದರು.

ಗೋಷ್ಠಿಯಲ್ಲಿ ಮೂಡಾ ಅಧ್ಯಕ್ಷ ನಹೀಮ್, ನಗರಸಭಾ ಸದಸ್ಯರಾದ ಶ್ರೀಧರ್, ಪೂರ್ಣಿಮಾ, ಜಾಕಿರ್ ಪಾಷ, ಮುಖಂಡರಾದ ಸಿ.ಎಂ.ದ್ಯಾವಪ್ಪ, ಶಿವಪ್ರಕಾಶ್, ಮಾಜಿ ಸದಸ್ಯ ಅನಿಲ್‌ಕುಮಾರ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ