ಶಿವಸುಂದರ್
ಕೊಲೆಗಡುಕ ಧರ್ಮಪೀಠದ
ಜೊತೆಗೆ
ನ್ಯಾಯ ಪೀಠದ ಸಹಗಮನ ನಡೆದಿದ್ದರೂ
ನೇತ್ರವಿಲ್ಲದ ನೇತ್ರಾವತಿಯ
ದಂಡೆಗುಂಟ ಹುದುಗಿಟ್ಟ
ಸತ್ಯಗಳ ತಲೆಬುರುಡೆಗಳು
ಮೇಲೇದ್ದು ಬರುತ್ತಲೇ ಇವೆ..
ಸತ್ತರೂ
ಸಾಕ್ಷಿ ನುಡಿಯುತ್ತಲೇ ಇವೆ..
ಆದರೂ,
ನಾಚಿಕೆಯಿಲ್ಲದ ನ್ಯಾಯಸಂಹಿತೆಗಳು
ಕೊಲೆಗಾರನ ಒಡ್ಡೋಲಗದಲ್ಲಿ ಮುಜರೆ ಸಲ್ಲಿಸುತ್ತಲೇ ಇವೆ..
ಬಯಲುಮಾಡುವ ಬಾಯಿಗಳಿಗೆ ಬೀಗ ಜಡಿದು
ಸತ್ಯದ ಬೂದಿಯನ್ನು
ನೇತ್ರಾವತಿ ಯಲ್ಲಿ
ವಿಸರ್ಜನೆ ಮಾಡುತ್ತಿವೆ..
ಆದರೆ ಸತ್ಯವೆಂಬುದು
ಬೇತಾಳವೆಂದೂ..
ಬೂದಿಯಿಂದಲೂ ಜಿಗಿದೇಳುವ
ಫೀನಿಕ್ಸ್ ಎಂದೂ
ರುಜುವಾಗುತ್ತಲೇ ಇದೆ…




