Thursday, October 10, 2024

ಪ್ರಾಯೋಗಿಕ ಆವೃತ್ತಿ

ನೆಲ-ಜಲ ಹೋರಾಟದಲ್ಲಿ ಎಚ್.ಡಿ. ದೇವೇಗೌಡರ ಪಾತ್ರ ಅಪಾರ : ಡಿ.ಸಿ.ತಮ್ಮಣ್ಣ

ವರದಿ : ಪ್ರಭು ವಿ ಎಸ್

ನೆಲ-ಜಲ ಹೋರಾಟದಲ್ಲಿ ದೇವೇಗೌಡರ ಪಾತ್ರ ಅಪಾರ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಮದ್ದೂರು ತಾಲೂಕಿನ, ಗೆಜ್ಜಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನತಾ ಜಲಧಾರೆ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸಿದ ಏಕೈಕ ವ್ಯಕ್ತಿಯೆಂದರೆ ಅದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಾತ್ರ ಎಂದರು.

ಕಾವೇರಿ ನದಿ ನೀರು ಮಾತ್ರವಲ್ಲದೆ ಕೃಷ್ಣಾ ನದಿ, ಆಲಮಟ್ಟಿ ಜಲಾಶಯ ಸೇರಿದಂತೆ ರಾಜ್ಯದ ಸಮಗ್ರ ನೀರಾವರಿ ಯೋಜನೆಗೆ ಹಾಗೂ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಹೋರಾಟ ಮಾಡಿದ ಧೀಮಂತ ವ್ಯಕ್ತಿ ಎಚ್.ಡಿ. ದೇವೇಗೌಡ ಎಂದು ಬಣ್ಣಿಸಿದರು.

ಮುಂದಿನ ದಿನಗಳಲ್ಲಿ ಯುದ್ಧ ನಡೆದರೆ ಅದು ಕುಡಿಯುವ ನೀರಿಗಾಗಿ ಮಾತ್ರ ಇದನ್ನು ಜೆಡಿಎಸ್ ಪಕ್ಷ ಮಾತ್ರ ಅರಿತಿದ್ದು, ರಾಜ್ಯದ ಜನತೆಗೆ ಹಾಗೂ ರೈತರಿಗೆ ನೀರಿನ ಮಹತ್ವ ತಿಳಿಸುವ ಉದ್ದೇಶದಿಂದ ಜಲಧಾರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ರಾಜ್ಯದ ಜನರು ಇದನ್ನು ಮನಗಂಡು ಪಕ್ಷಾತೀತವಾಗಿ ಬೆಂಬಲ ನೀಡಬೇಕೆಂದು ಕೋರಿದರು.

ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಜೆಡಿಎಸ್ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನನ್ನ ಅಧಿಕಾರ ಅವಧಿಯಲ್ಲಿ ಬಳಸಿದ ನೀರನ್ನು ಪುನರ್ಬಳಕೆಗೆ ಆಗುವಂತೆ ಯೋಜನೆಯನ್ನು ರೂಪಿಸಿದ್ದು, ಇದರಿಂದ ರೈತರಿಗೆ ಅನುಕೂಲವಾಗಿದೆ. ಮುಂದಿನ 60- 70 ವರ್ಷ ನೀರಿನ ಬವಣೆ ಉಂಟಾಗದಂತೆ ಈಗಾಗಲೇ ಕಾಮಗಾರಿಯನ್ನು ರೂಪಿಸಲಾಗಿದೆ ಎಂದರು.

ವಿರೋಧ ಪಕ್ಷಗಳು ನಮ್ಮ ಜಲಧಾರೆ ಕಾರ್ಯಕ್ರಮದ ಬಗ್ಗೆ ಏನೇ ಟೀಕೆ ಮಾಡಿದರೂ ಸಹ ಅದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮಗೆ ರಾಜ್ಯದ ರೈತರ ಹಾಗೂ ಜನರ ಹಿತ ಮುಖ್ಯ.

ನಮ್ಮ ರಾಜ್ಯದ ನದಿ ನೀರನ್ನು ನಮ್ಮ ಜನರು ಬಳಕೆ ಮಾಡಿಕೊಳ್ಳುವಂತೆ ಕಾನೂನುಗಳನ್ನು ರೂಪಿಸಬೇಕಿದೆ, ಇದು ದೇವೇಗೌಡರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು. ಇದೇ ವೇಳೆ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ತಾಲೂಕು ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಪುರಸಭಾ ಅಧ್ಯಕ್ಷ ಸುರೇಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ಜೆಡಿಎಸ್ ಕಾರ್ಯಾಧ್ಯಕ್ಷ ದಾಸೇಗೌಡ ಹಾಗೂ ಮುಖಂಡರು ಭಾಗವಹಿಸಿದ್ದರು.

ಜಲಧಾರೆ ರಥವು ಗೆಜ್ಜಲಗೆರೆ, ಚನ್ನೇಗೌಡನದೊಡ್ಡಿ, ಮದ್ದೂರು ಪಟ್ಟಣ, ಶಿವಪುರ, ರುದ್ರಾಕ್ಷಿಪುರ, ತೈಲೂರು, ಕೆ.ಹೊನ್ನಲಗೆರೆ, ಕೂಳಗೆರೆ, ಇಗ್ಗಲೂರು, ಚಂದೂಪುರ ಮಾರ್ಗವಾಗಿ ಕೆ.ಎಂ.ದೊಡ್ಡಿಗೆ ರಥಯಾತ್ರೆ ತೆರಳಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!