Monday, November 23, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ನಗರಕೆರೆ ಡೇರಿ ಸುವರ್ಣ ಭವನಕ್ಕೆ ಅನುದಾನ : ಹರೀಶ್ ಬಾಬು

ಸಹಕಾರಿ ತತ್ವದಡಿ ಕಾರ್ಯನಿರ್ವಹಿಸಿ ಸುವರ್ಣ ವರ್ಷಾಚರಣೆಗೆ ದಾಪುಗಾಲು ಇಡುತ್ತಿರುವ ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯ ಶ್ಲಾಘನೀಯವಾದದ್ದು ಎಂದು ಮನ್ ಮುಲ್ ನಿರ್ದೇಶಕ ಎಂ.ಕೆ. ಹರೀಶ್ ಬಾಬು ಮುಕ್ತ ಕಂಠದಿಂದ ಶ್ಲಾಘಿಸಿದರು

ಮದ್ದೂರು ತಾಲ್ಲೂಕಿನ ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ
ರಾಸುಗಳಿಗೆ ವಿಮೆ ಯೋಜನೆ ಕಾರ್ಯಕ್ರಮ ಉದ್ಘಾಟನೆ ಬರಡು ರಾಸು ತಪಾಸಣಾ ಶಿಬಿರ ಹಾಗೂ ಹಾಲು ಉತ್ಪಾದಕರಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂಘವು ಹಾಲು ಸಂಗ್ರಹ ಹಾಗೂ ಜಿಡ್ಡಿನಾಂಶ ಅಳೆಯಲು ಆಟೋ ಪ್ಯಾಟ್ ಯಂತ್ರ ಅಳವಡಿಸಿ ಪಾರದರ್ಶಕ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಾ ಸಂಘದ ಸುಸ್ಥಿರತೆ ಜೊತೆಗೆ ಹಾಲು ಉತ್ಪಾದಕರ ಹಿತಕ್ಕೂ ಬದ್ದತೆ ತೋರಿ ಇತರೆ ಸಂಘಕ್ಕೆ ಮಾದರಿಯಾಗಿದೆ ಎಂದರು.

ನಲವತ್ತೆಂಟು ವರ್ಷ ಮುಗಿಸಿ ಕಾರ್ಯ ನಿರ್ವಹಿಸುತ್ತಿರುವ ಸಂಘವು ಸುವರ್ಣ ವರ್ಷಾಚರಣೆಗೆ ಭವನ ನಿರ್ಮಾಣಕ್ಕೆ ವೈಯಕ್ತಿಕ ನೆರವಿನ ಜೊತೆಗೆ ಮನ್ ಮುಲ್ ವತಿಯಿಂದ ಹಾಗು ಶಾಸಕರ ಅನುದಾನದಿಂದ ನೆರವು ಕೊಡಿಸುವ ಭರವಸೆ ನೀಡಿದರು.

ಮನ್ ಮುಲ್ ನಿರ್ದೇಶಕ ಎಸ್ ಪಿ ಸ್ವಾಮಿ ಮಾತನಾಡಿ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಮನ್ ಮುಲ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಇತರೆ ಉತ್ಪನ್ನಗಳ ಜೊತೆ ಸ್ಪರ್ಧಾತ್ಮಕತೆ ನಡೆಸಿ ಯಶಸ್ಸು ಸಾಧಿಸಲು ನೆರವಾಗಿ ಎಂದರು.

ಆಟೊಪ್ಯಾಟ್ ಅಳವಡಿಕೆ ಗುಣಮಟ್ಟದ ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡಲಿದೆ. ಹಾಲಿನ ಗುಣಮಟ್ಟಕ್ಕೆ ತಕ್ಕ ಬೆಲೆ ಉತ್ಪಾದಕರಿಗೆ ಸಿಗಲಿದೆ, ಇದರ ಲಾಭ ಪಡೆಯಲು ಮುಂದಾಗಬೇಕು. ಇದಲ್ಲದೆ ಮನ್ ಮುಲ್ ನಲ್ಲಿ
ಸಂಘದ ಸದಸ್ಯ ಕುಟುಂಬದ ಶಿಕ್ಷಣ ಸೇರಿ ಆರೋಗ್ಯ ಸೇವೆ ವಿಮೆಯಂತಹ ಹಲವು ಸೌಲಭ್ಯ ನೀಡುತ್ತಾ ಬಂದಿದೆ ಎಂದರು.

ಮನ್ ಮುಲ್ ವ್ಯವಸ್ಥಾಪಕ ನಿರ್ದೆಶಕ ಡಾ.ಮಂಜೇಶ್ ಪಿ ಆರ್ ಮಾತನಾಡಿ ದೆಹಲಿ ಯಲ್ಲಿ ಮನ್ ಮುಲ್ ನ ಹಾಲು ಮಾರಾಟಕ್ಕೆ ಅವಕಾಶ ದೊರೆತಿದ್ದು ದೆಹಲಿಯಲ್ಲಿನ ಸ್ಥಳೀಯಾ ಹಾಲಿಗಿಂತ ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡುತ್ತಿದ್ದು ನಮ್ಮ ಹಾಲಿನ ಬಗ್ಗೆ ಗ್ರಾಹಕರು ಮತ್ತು ಸ್ತಳೀಯ ಆಡಳಿತ ಸಂತೃಪ್ತಿ ವ್ಯಕ್ತಪಡಿಸಿದೆ. ದೆಹಲಿ ಮಾರುಕಟ್ಟೆ ನೀರಿಕ್ಷೆಯಂತೆ ವಿಸ್ತಾರ ಪಡೆದರೆ ಮನ್ ಮುಲ್ ಗ್ರಾಹಕರಿಗೆ ಮತ್ತಷ್ಠು ಬೆಲೆ ನೀಡಬಹುದು, ಅದಕ್ಕಾಗಿ ಉತ್ಪಾದಕರ ಸಹಕಾರ ಬಹುಮುಖ್ಯ ಎಂದರು.

ಮನ್ ಮುಲ್ ಆಡಳಿತ ವಿಭಾಗದ ವ್ಯವಸ್ಥಾಪಕ ಡಾ.ಅಕ್ಕಲಪ್ಪಪ್ಪರೆಡ್ಡಿ ಮಾತನಾಡಿ ರಾಸುಗಳಿಗೆ ತಪ್ಪದೆ ವಿಮೆ ಮಾಡಿಸಿ ಮತ್ತು ಪಶುಗಳಿಗೆ ಸಮತೋಲಿತ ಆಹಾರ ನೀಡಿ ಹಸುಗಳ ಆರೋಗ್ಯದಂತೆಯೇ ಉತ್ಪಾದಕರ ಆರೋಗ್ಯ ಕೂಡ ಬಹುಮುಖ್ಯವಾದದ್ದು, ಈ ನಿಟ್ಟಿನಲ್ಲಿ ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘ ವಿಶೇಷ ಕಾಳಜಿ ವಹಿಸಿ ಮುಂಜಾನೆ ಹಾಲು ಸಂಗ್ರಹಣೆ ವೇಳೆಯಲ್ಲಿಯೆ ಹಾಲು ಉತ್ಪಾದಕರಿಗೆ ಆರೊಗ್ಯ ತಪಾಸಣೆ ಮಾಡಿಸಿರುವುದು ಅನುಕರಣೀಯ ಎಂದರು.

ಇದೆ ವೇಳೆ ನೂತನ ಮನ್ ಮುಲ್ ನಿರ್ದೇಶಕ ಎಸ್ ಪಿ ಸ್ವಾಮಿ, ಎಂ ಕೆ ಹರೀಶ್ ಬಾಬು, ಮನ್‌ಮುಲ್ ಉಪ ವ್ಯವಸ್ಥಾಪಕ ನೀರ್ದೆಶಕ ಡಾ.ಮಂಜೇಶ್ ಗೌಡ ಹಾಗು ವಿಸ್ತರಣಾಧಿಕಾರಿ ರತ್ನಮ್ಮ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ರೂಪ ರಾಜಶೇಖರ್ ವಹಿಸಿದ್ದರು. ಉಪಾಧ್ಯಕ್ಷ ಎನ್ ಪಿ ರಾಜಶೇಖರ್, ನಿರ್ದೇಶಕ ಎನ್.ಎಚ್.ಶಂಕರ್, ಎನ್ ಎಚ್ ಶೇಖರ, ಶಿವಲಿಂಗಯ್ಯ, ಕರಿಯಪ್ಪ, ನ.ಲಿ.ಕೃಷ್ಣ ಹಾಗೂ ಮನ್ ಮುಲ್ ಸಹಾಯಕ ವ್ಯವಸ್ಥಾಲಕ ಡಾ.ಗೋವರ್ಧನೆ, ಹಿರಿಯ ಪಶು ಪರಿವೀಕ್ಷಕರಾದ ಯೋಗೇಶ್,  ಯೊಗೇಶ ಹಾಗೂ ಹಿರಿಯ ಆರೋಗ್ಯಾಧಿಕಾರಿ ಮೇಘಶ್ರೀ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ