Saturday, November 21, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಅಂಗಡಿ ಮಳಿಗೆಗಳ ಒತ್ತುವರಿ ತೆರವು ಕಾರ್ಯಾಚರಣೆ

ಸಾರ್ವಜನಿಕರ ದೂರು ಹಾಗೂ ಪಾದಚಾರಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪುರಸಭೆ ಅಧಿಕಾರಿಗಳು ನಾಗಮಂಗಲ ಪೊಲೀಸರ ಇಲಾಖೆಯ ರಕ್ಷಣೆಯಲ್ಲಿ ಅಕ್ರಮವಾಗಿ ಅಂಗಡಿ ಮಳಿಗೆಗಳ ಮುಂದೆ ಹೆಚ್ಚುವರಿ ಜಾಗವನ್ನು ಆಕ್ರಮಿಸಿಕೊಂಡದ್ದ ಜಾಗವನ್ನು ಬುಧವಾರ ತೆರವುಗೊಳಿಸಲಾಯಿತು.

ಕಾರ್ಯಾಚರಣೆಯಲ್ಲಿ ಪುರಸಭೆ ಮುಖ್ಯಾಅಧಿಕಾರಿ ಸಿ.ಶ್ರೀನಿವಾಸ್ ಮತ್ತು ಕಂದಾಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಪುರಸಭೆ ಕಚೇರಿ ಸಿಬ್ಬಂದಿಗಳು ಪಟ್ಟಣದ ವ್ಯಾಪ್ತಿಯ ವಾಣಿಜ್ಯ ಅಂಗಡಿ ಮಳಿಗೆಗಳ ಮುಂಭಾಗ ಹೆಚ್ಚುವರಿ ಜಾಗ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡಿಕೊಂಡಿದ್ದ ಮಾಲೀಕರಿಗೆ ಪುರಸಭೆ ವತಿಯಿಂದ ಹಲವು ಬಾರಿ ತಿಳುವಳಿಕೆ ಹೇಳಿ, ನೋಟಿಸ್ ಜಾರಿ ಮಾಡಿದ್ದರು. ಆದರೂ ಅಕ್ರಮ ಒತ್ತುವರಿ ಜಾಗ ತೆರವು ಗೊಳಿಸಿರಲಿಲ್ಲ.

ಇದನ್ನು ಮನಗಂಡ ಪುರಸಭೆ ಅಧಿಕಾರಿಗಳು ಇಂದು ಟಿಬಿ ಬಡಾವಣೆಯ ಕೋಟೆ ಬೆಟ್ಟ ರಸ್ತೆಯ ಹತ್ತಕ್ಕೂ ಹೆಚ್ಚು ಮಳಿಗೆಗಳ ಮುಂಭಾಗದ ಒತ್ತುವರಿ ಜಾಗವನ್ನು ತೆರವುಗೊಳಿಸಿದರು.

ಪುರಸಭೆಯ ಮುಖ್ಯ ಅಧಿಕಾರಿ ಶ್ರೀನಿವಾಸ್  ಮಾತನಾಡಿ ಅಕ್ರಮವಾಗಿ ತಮ್ಮ ವ್ಯಾಪ್ತಿಯ ಮೀರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಅಂಗಡಿ ಮಾಲೀಕರ ಬಗ್ಗೆ ಪುರಸಭೆ ಸದಸ್ಯರು ಮತ್ತು ಸಚಿವರ ಬಳಿ ಈಗಾಗಲೇ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಪಟ್ಟಣದ ವ್ಯಾಪ್ತಿಯಲ್ಲಿ ಸಂಚಾರಿ ರಸ್ತೆ ಸುಗಮ ಮಾಡುವ ಉದ್ದೇಶದಿಂದ ಈ ಕ್ರಮ ಜರುಗಿಸಲಾಗಿದೆ ಎಂದರು.

ಪಟ್ಟಣದ ಪ್ರಮುಖ ರಸ್ತೆ ವ್ಯಾಪಾರೀಕರಣದ ರಸ್ತೆಗಳಲ್ಲಿ ವ್ಯಾಪಾರಸ್ಥರು ಆಕ್ರಮವಾಗಿ ರಸ್ತೆ ಬದಿಯಲ್ಲಿ ಅಂಗಡಿ ಸಾಮಾನುಗಳನ್ನು ಜೋಡಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ, ಇದು ಅಪರಾಧವಾಗುತ್ತದೆ. ಹಿಂದಿನಿಂದ ಕಾರ್ಯಚರಣೆಗೆ ಸಾರ್ವಜನಿಕರು ಒತ್ತಾಯವಿರುತ್ತದೆ. ವ್ಯಾಪಾರಸ್ಥರು ದಯವಿಟ್ಟು ಪುರಸಭೆಗೆ ಸಹಕರಿಸಿ ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿಕೊಂಡು ವ್ಯಾಪಾರ ಮಾಡಬೇಕು ಹಾಗೂ ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳು ನಿಗದಿಪಡಿಸಿದ ಜಾಗವನ್ನು ಬಿಟ್ಟು ಬೇರೆ ಬೇರೆ ಸ್ಥಳಗಳಲ್ಲಿ ವ್ಯಾಪಾರ ಮಾಡುತ್ತಿದ್ದು ಇದು ಅಪರಾಧವಾಗಿರುತ್ತದೆ. ಪುರಸಭೆಗೆ ಮಾಹಿತಿ ನೀಡಿ ನಿಮಗೆ ನಿಗದಿ ಮಾಡಿದ ಜಾಗದಲ್ಲಿ ವ್ಯಾಪಾರ ಮಾಡಬೇಕು ಎಂದು ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ