Saturday, May 25, 2024

ಪ್ರಾಯೋಗಿಕ ಆವೃತ್ತಿ

ನಾರಾಯಣಗೌಡ ಪೊಲಿಟಿಕಲ್ ಬೆಗ್ಗರ್

ಏ…ನಾರಾಯಣಗೌಡ ಯು ಆರ್ ಎ ಪೊಲಿಟಿಕಲ್ ಬೆಗ್ಗರ್…ರಾಜಕೀಯ ಅಧಿಕಾರಕ್ಕಾಗಿ ಭಿಕ್ಷಾ ಪಾತ್ರೆ ಹಿಡಿದುಕೊಂಡು ಮೊದಲು ಬಿಎಸ್ಪಿ ನಂತರ ಜೆಡಿಎಸ್, ಈಗ ಬಿಜೆಪಿ ಪಕ್ಷ ಸೇರಿರುವ ನೀನು ನನ್ನ ಬಗ್ಗೆ ಮಾತನಾಡೋವಾಗ ನಾಲಿಗೆ ಬಿಗಿ ಹಿಡಿದು ಮಾತಾಡು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಎಂದೂ ನಿಮ್ಮ ಮನೆ ಬಾಗಿಲಿಗೆ ಬರಲಿಲ್ಲ. ನೀವು ನನ್ನ ಮನೆಗೆ ಬಂದು ರಮೇಶಣ್ಣಾ ನಂಗೆ ಟಿಕೆಟ್ ಕೊಡಿಸಿ ಎಂದು ನನ್ನನ್ನು ಕೇಳಿಕೊಂಡಿದ್ದೀಯ‌ ನಾನು ಜೆಡಿಎಸ್ ಬಿಟ್ಟ ಮೇಲೆ ಚಲುವರಾಯಸ್ವಾಮಿ ಅವರ ಮನೆಗೆ ಹೋಗಿಲ್ಲ. ಇನ್ನು ನಿನ್ನ ಮನೆ ಬಾಗಿಲಿಗೆ ಯಾವಾಗ ಬಂದಿದ್ದೆ ಹೇಳು, ಮೊದಲು ನಿನಗೆ ರಾಜಕೀಯ ಭವಿಷ್ಯ ನೀಡಿದ ಪಕ್ಷವನ್ನು ನೆನೆಯುವ ಕೆಲಸ ಮಾಡು ಎಂದು ಎಂದು ಕಿಡಿಕಾರಿದರು.

ಕನ್ನಡ ಮಾತನಾಡುವುದಕ್ಕೇ ಬರುವುದಿಲ್ಲ, ಕನ್ನಡ ಭಾಷೆಯ ಬಳಕೆ ಬಗ್ಗೆ ತಿಳಿದೇ ಇಲ್ಲ. ಕನ್ನಡ ಮಾತನಾಡಲು ಬರದವ ನಮಗೆ ಪಾಠ ಹೇಳಿಕೊಡಲು ಬರ್ತಾರೆ.

ನಾನು ಜೆಡಿಎಸ್ ಪಕ್ಷದ ಕಟ್ಟಾಳು.1984ರಿಂದಲೂ ಜೆಡಿಎಸ್ ಪಕ್ಷವನ್ನು ಕಟ್ಟಲು ಮುಂದಾಗಿದ್ದೇನೆ. ಇದು ಪ್ರಜಾಪ್ರಭುತ್ವ. ಪ್ರಜೆಗಳೇ ಪ್ರಭುಗಳು,ನೀವು ಸೇವಕರು. ಒಂದು ಪಕ್ಷದ ಅಧ್ಯಕ್ಷರ ಮೇಲೆ ಮಾತನಾಡುವ ಮೊದಲು ನಾಲಿಗೆ ಮೇಲೆ ಹಿಡಿತವಿರಲಿ ಇಲ್ಲಿ ಯಾರು ಆಳುಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಮನೆಯಲ್ಲಿ ದೇವರ ಫೋಟೋ ಜೊತೆ ದೇವೇಗೌಡರ ಫೋಟೋ ಇದೆ. ನಾನು ದಿನಾ ಬೆಳಿಗ್ಗೆ ಎದ್ದು ದೇವೇಗೌಡರ ಫೋಟೋ ನೋಡಿಕೊಂಡು ಮನೆಯಿಂದಾಚೆ ಬರುತ್ತೇನೆ. ಹೌದು, ನಾನು ಬೆಳಿಗ್ಗೆ 4 ಗಂಟೆಗೆ ಎದ್ದು ನಮ್ಮ ನಾಯಕರ ಮನೆ ಬಾಗಿಲಿಗೆ ಹೋಗುತ್ತೇನೆಯೇ ಹೊರತು ನಿಮ್ಮ ಹಾಗೆ ಬೇರೆ ಪಕ್ಷದ ನಾಯಕರ ಮನೆ ಬಾಗಿಲು ತಟ್ಟಲು ಹೋಗುವುದಿಲ್ಲ. ನೀವು ಇಂದು ಈ ಪಕ್ಷದಲ್ಲಿದ್ದರೆ ನಾಳೆ ಮತ್ತೊಂದು ಪಕ್ಷಕ್ಕೆ ಭಿಕ್ಷಾ ಪಾತ್ರೆ ಹಿಡಿದುಕೊಂಡು ಹೋಗುತ್ತೀರಾ ನಿಮಗೆ ನಾಚಿಕೆಯಾಗಬೇಕು ಎಂದರು.

ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ನೀನು ಬಾಂಬೆಯಲ್ಲಿ ಕಸ ಹೊಡೆಯುತ್ತಿದ್ದೆ. ಜೆಡಿಎಸ್ ಪಕ್ಷದ ಟಿಕೆಟ್‌ಗಾಗಿ ನೀನು ನನ್ನ ಕಾಲಿಗೆ ಬಿದ್ದೇ ವಿನಃ ನಾನು ನಿನ್ನ ಮನೆ ಬಾಗಿಲಿಗೆ ಎಂದೂ ಬಂದಿಲ್ಲ. ಅಂದು ಜೆಡಿಎಸ್ ವರಿಷ್ಠರೊಂದಿಗೆ ಮಾತನಾಡಿ ನಮ್ಮ ನಾಯಕರು ನಿನಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಳ್ಳಲಿಲ್ಲ ಎಂದಿದ್ದರೆ ನೀನು ಇಂದು ಬಾಂಬೆಯಲ್ಲಿ ಕಸ ಹೊಡೆಯುತ್ತಿದ್ದೆ ಎಂದು ವ್ಯಂಗ್ಯವಾಡಿದರು.

ಮಾನನಷ್ಟ ಮೊಕದ್ದಮೆ ಹೂಡುವೆ

ನನ್ನ ನೆಂಟ ರೇಷ್ಮೆ ಇಲಾಖೆಯಲ್ಲಿ ಹಣ ತಿಂದಿರುವ ಬಗ್ಗೆ ವಾರದೊಳಗೆ ದಾಖಲೆ ನೀಡದಿದ್ದರೆ ಮಾನಹಾನಿಯಾಗುವ ರೀತಿಯಲ್ಲಿ ಸುಳ್ಳು ಹೇಳಿಕೆ ನೀಡಿರುವ ಸಚಿವ ನಾರಾಯಣಗೌಡ ಅವರ ವಿರುದ್ಧ ಮಾನನಷ್ಟ ದಾವೆ ಹೂಡುವುದಾಗಿ ಎಚ್ಚರಿಸಿದರು.

ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ರಾತ್ರೋರಾತ್ರಿ ಡಮ್ಮಿ ಮಾಡಿ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಹಸ್ತಾಂತರಿಸಿ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡರ ಸೋಲಿಗೆ ಕಾರಣರಾಗಿರುವ ಸಚಿವ ನಾರಾಯಣಗೌಡ ಬಿಜೆಪಿ ಪಕ್ಷಕ್ಕೆ ಅನ್ಯಾಯ ಮಾಡಿ ಕಾಂಗ್ರೆಸ್ ಸೇರಲು ಹವಣಿಸಿದ್ದಾರೆ.

ರಾತ್ರಿ ಹೊತ್ತು ಸಿದ್ದರಾಮಯ್ಯ ಮತ್ತು ಡಿಕೆಶಿ ಮನೆ ಬಾಗಿಲು ಹೊಂಚು ಹಾಕುತ್ತಿರುವುದನ್ನು ಗಮನಿಸಿರುವ ಬಿಜೆಪಿ ವರಿಷ್ಠರು ಉಸ್ತುವಾರಿ ಹುದ್ದೆಯಿಂದ ತೆಗೆದುಹಾಕಿರುವುದು ಎಲ್ಲರಿಗೂ ಗೊತ್ತಿದೆ ಎಂದು ಛೇಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!