Friday, November 20, 2026

ಪ್ರಾಯೋಗಿಕ ಆವೃತ್ತಿ

ಎಲ್ಐಸಿ 69ನೇ ವಿಮಾ ಸಪ್ತಾಹ : ಮಂಡ್ಯದಲ್ಲಿ ಜೀವ ವಿಮಾ ನಡಿಗೆ

ಮಂಡ್ಯ ನಗರದಲ್ಲಿರುವ ಭಾರತೀಯ ಜೀವ ವಿಮಾ ಮಂಡ್ಯ ಶಾಖೆ ವತಿಯಿಂದ ಭಾರತ ದೇಶದ ಹೆಮ್ಮೆಯ ಭಾರತೀಯ ಜೀವ ವಿಮಾ ನಿಗಮದ 69ನೇ ವಿಮಾ ಸಪ್ತಾಹದ ಅಂಗವಾಗಿ “ಜೀವ ವಿಮಾ ನಡಿಗೆ “ಎಂಬ ಜಾಗೃತಿ ಜಾಥಾ ಮಂಡ್ಯ ನಗರದಲ್ಲಿ ಬುಧವಾರ ನಡೆಯಿತು.

ಜಾಥವು ಮಂಡ್ಯದ ಕೇಂದ್ರ ಕಚೇರಿಯಿಂದ ಹೋರಟು ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಎಲ್ಐಸಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಜೀವ ವಿಮಾ ನಡಿಗೆಯ ನೇತೃತ್ವವನ್ನು ಹಿರಿಯ ಶಾಖಾ ವ್ಯವಸ್ಥಾಪಕ ಬಸವರಾಜ್ ತೆಗ್ಗಿ ವಹಿಸಿದ್ದರು ನಂತರ ಮಾತನಾಡಿದ ಅವರು .3ನೇ ದಿನದ ವಿಮಾ ಜಾಗೃತಿ ಸಂದೇಶ ಏನೆಂದರೆ ನಾವು 2047ರ ಹೊತ್ತಿಗೆ ಎಲ್ಲರಿಗೂ ಪಾಲಿಸಿ ಮಾಡಿಸಿ ಕೊಡುವ ಉದ್ದೇಶ ಹೊಂದಿದ್ದೇವೆ. ಪಾಲಿಸಿದಾರರು ಹೆಚ್ಚು ಹೆಚ್ಚು ವ್ಯವಹಾರ ಮಾಡಿ. ನಾವು ಹಳ್ಳಿ ಹಳ್ಳಿಗಳಿಗೂ ತಲುಪಿಸುವ ಕಾರ್ಯ ಮಾಡುತ್ತೇವೆ.ನಮ್ಮ ಸಂಸ್ಥೆ ನಂಬರ್ ಒನ್ ಸ್ಥಾನದಲ್ಲಿದೆ ಅದು ಹೀಗೆ ನಿಮ್ಮೆಲ್ಲರ ಸಹಕಾರದಿಂದ ಮುಂದುವರೆಯಲ್ಲಿ ಎಂದು ತಿಳಿಸಿದರು.

ವಿಮಾ ಅಧಿಕಾರಿ ರಾಜೀವ್ ಮಾತನಾಡಿ ಎಲ್ಲಾ ಪಾಲಿಸಿದಾರರಿಗೂ 69ನೇ ವಿಮಾ ಸಪ್ತಾಹದ ಶುಭಾಶಯ ಕೋರಿದರು.ನಾವು ಇಂದು ವಿಮಾ ಸಪ್ತಾಹದ ಅಂಗವಾಗಿ ವಿಮಾ ನಡಿಗೆಯನ್ನು ನಮ್ಮ ಶಾಖಾವತಿಯಿಂದ ಹಮ್ಮಿಕೊಂಡಿದ್ದು 100 ರಿಂದ 150 ಜನ ಪ್ರತಿನಿಧಿಗಳು, ಸಿಂಬ್ಬದಿಗಳು, ಅಭಿವೃದ್ದಿ ಅಧಿಕಾರಿಗಳು ಜಾಥಾದಲ್ಲಿ ಭಾಗವಹಿಸಿ ಯಶಸ್ವಿಗೊಳ್ಳಿದ್ದಾರೆ ಎಂದರು.

ಅಧಿಕಾರಿಗಳಾದ ಪಾಂಡೆ, ರಾಘವೇಂದ್ರ, ಅಭಿವೃದ್ಧಿ ಅಧಿಕಾರಿಗಳಾದ ಯೋಗೀಶ್, ಸುಭಾಷ್ ಶೆಟ್ಟಿ, ಸುನಿಲ್ ಹಾಗೂ ವಿಮಾ ಅಧಿಕಾರಿಗಳಾದ ರಾಜೀವ್, ಪ್ರತಿನಿಧಿ ಸಂಘದ ಪದಾಧಿಕಾರಿಗಳಾದ ಲಕ್ಷ್ಮಣ್, ವಿಭಾಗಿಯ ಕಾರ್ಯದರ್ಶಿ ಮಹೇಶ್, ಪ್ರತಿನಿಧಿಗಳಾದ ಕೀಲಾರ ಸುರೇಶ್, ಮಂಗಲ ಲಂಕೇಶ್, ಇಂಡುವಾಳು ಮಹೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ