Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಗಾಂಧಿನಗರ ಬಡಾವಣೆಯ ಗಣೀಶ ವಿಸರ್ಜನೆ

ಜೈ ಭೀಮ್ ಗೆಳೆಯರ ಬಳಗದ ವತಿಯಿಂದ ಮಂಡ್ಯ ಗಾಂಧಿನಗರ ಬಡಾವಣೆಯ 9ನೇ ಅಡ್ಡರಸ್ತೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಯನ್ನು ಅದ್ದೂರಿಯಾಗಿ ವಿಸರ್ಜನೆ ಮಾಡಲಾಯಿತು.

ಜೈ ಭೀಮ್ ಗೆಳೆಯರ ಬಳಗದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ಸದಸ್ಯರಿದ್ದು, ಮದ್ದೂರಿನ ಕೋಮು ಗಲಭೆಯ ನಡುವೆಯೂ ಉಭಯ ಸಮುದಾಯದ ಯುವಕರು ಪರಸ್ಪರ ಹಿಂದು ಕೇಸರಿ ಶಾಲು ಹಾಗೂ ಮುಸ್ಲಿಂಮರ ಟೋಪಿ ವಿನಿಮಯ ಮಾಡಿಕೊಂಡು ಸಾಮರಸ್ಯವಾಗಿ ಗಣೇಶ ಮೂರ್ತಿಯ ವೈಭವಪೂರಿತ ಮೆರವಣಿಗೆ ನಡೆಸಿ, ಜೈಕಾರ ಕೂಗಿ, ನೃತ್ಯ ಮಾಡಿ ಸಂಭ್ರಮಿಸಿದರು ಮಾದರಿಯಾದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಶೈಲೇಂದ್ರಕುಮಾರ್ ಮಾತನಾಡಿ, ಇಂದಿನ ಗಣೇಶ ಮೂರ್ತೀ ವಿಸರ್ಜನಾ ಮೆರವಣಿಗೆಯಲ್ಲಿ ಜೈ ಭೀಮ್ ಗೆಳೆಯರ ಬಳಗದಲ್ಲಿನ ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯದ ಎಲ್ಲ ಯುವಕರು ಒಟ್ಟಿನಿಂದ ಮಾದರಿಯಾಗಿದ್ದಾರೆ. ಮದ್ದೂರಿನಲ್ಲಿ ನಡೆದ ಅಹಿತಕರ ಘಟನೆ ಎಂದಿಗೂ ಮರುಕಳಿಸಬಾರದು ಎಂದು ಅಭಿಪ್ರಾಯ ಪಟ್ಟರು.

ಮದ್ದೂರಿನಲ್ಲಿಯೂ ಗಲಭೆ ನಡೆಯುತ್ತಿರಲಿಲ್ಲ, ಯಾರದೋ ಕುಚೋದ್ಯಕ್ಕೆ ಒಳಗಾಗಿ ಘಟನೆ ನಡೆದು ಹೋಗಿದೆ. ಮಂಡ್ಯದಲ್ಲಿ ಎಲ್ಲ ಸಮುದಾಯದವರು ಒಂದೇ ಎಂಬ ಸಂದೇಶದವನ್ನು ರಾಜ್ಯಕ್ಕೆ ನೀಡುತ್ತಿದ್ದೇವೇ ಎಂದು ಹೇಳಿದರು.

ಮುಸ್ಲಿಂ ಯುವಕ ಸಲ್ಮಾನ್ ಮಾತನಾಡಿ, ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯದ ಎಲ್ಲ ಯುವಕರು ಒಗ್ಗೂಡಿ ಗಣೇಶ ಮೂರ್ತಿ ವಿಸರ್ಜನೆ ಮಾಡುತ್ತಿದ್ದೇವೆ. ಯಾವುದೇ ಭೇದ-ಭಾವವಿಲ್ಲದೆ, ಯಾವುದೇ ತೊಂದರೆಗಳಿಗೆ ಅವಕಾಶ ನೀಡದೇ ಹಬ್ಬ ಆಚರಿಸುತ್ತಿದ್ದೇವೆ. ಯಾರದೋ ಕುಚೋದ್ಯಕ್ಕೆ ಕೆಲವರು ಮಾಡಿದ ತಪ್ಪಿದೆ ಎಲ್ಲರೂ ಹೊಣೆಯಾಗಲು ಸಾಧ್ಯವಿಲ್ಲ. ಮದ್ದೂರು ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಮೆರವಣಿಗೆ ವೇಳೆ ಯುವಕರಾದ ಚೇತನ್, ಹೇಮಂತ್, ವಿವೇಕ್, ನೂತನ್, ಹರ್ಷ, ಮನ್ನಾನ್, ಶಾಹಿದ್, ಆಫ್ರಿದ್, ಸೇರಿ ಹಲವರು ಭಾಗಿಯಾಗಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ