Sunday, November 22, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಇಬ್ಬರು ಸರಗಳ್ಳರ ಬಂಧನ ; 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿ ಸೇರಿದಂತೆ ವಿವಿಧೆಡೆ ಸರಗಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಆರೋಪಿಗಳಿಂದ 20.6 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಬೈಕನ್ನು ವಶಪಡಿಸಿಕೊಂಡಿದ್ದಾರೆ.

‍ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕು ಬನ್ನಿಸೆರೆಗ ಬಡಾವಣೆಯ ಗೋಪಾಲ ಬಿನ್ ಚನ್ನಪ್ಪ (34) ಹಾಗೂ ಮಲ್ಲಿಕಾರ್ಜುನ ಬಿನ್ ಲೇಟ್ ರವಿ (29) ಬಂಧಿತ ಆರೋಪಿಗಳು.

ಏನಿದು ಘಟನೆ ?

ಕಳೆದ ಸೆ.2 ರಂದು ಮಧ್ಯಾಹ್ನ 02-15 ಗಂಟೆಯ ಸಮಯದಲ್ಲಿ ನಾಗಮಂಗಲ ತಾಲ್ಲೂಕಿನ ಸಾತೇನಹಳ್ಳಿ ಗ್ರಾಮದ ಕೆರೆಯ ದಾರಿಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಶೋಭ ಅವರ ಕತ್ತಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರದಲ್ಲಿ ಸುಮಾರು 25 ಗ್ರಾಂ ತೂಕದಷ್ಟು ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದರು. ಈ ಬಗ್ಗೆ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರು.

ಈ ಪ್ರಕರಣದ ಆರೋಪಿತರ ಪತ್ತೆಗಾಗಿ ನಾಗಮಂಗಲ ವೃತ್ತದ ಪಿಎಸ್ಐ ನಿರಂಜನ ಕೆ.ಎಸ್ ನೇತೃತ್ವದಲ್ಲಿ ಬಿಂಡಿಗನವಿಲೆ ಠಾಣಾ ಪಿ.ಎಸ್.ಐ ಮಾರುತಿ ತಮ್ಮಣ್ಣನವರ್, ಸಿ.ಹೆಚ್.ಸಿ.ಯರವರಾದ ಪ್ರಶಾಂತ್ ಕುಮಾರ್, ಇಂದ್ರಕುಮಾರ್, ಮಧುಕುಮಾರ್, ರವಿಕಿರಣ್, ಲೋಕೇಶ್, ಸಿಪಿಸಿಯವರಾದ ಶಂಕರ್ ನಾಯ್ಕ, ದಿನೇಶ, ಕಿರಣ್ ಕುಮಾರ್, ಪ್ರಕಾಶ್ ರವನ್ನೊಗಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತಂಡವು ಕಳೆದ ಸೆ.12ರಂದು ಬೆಳಿಗ್ಗೆ 09 ಗಂಟೆ ಸಮಯದಲ್ಲಿ ನಾಗಮಂಗಲ ತಾಲ್ಲೂಕು ಹೊನ್ನಾವರ ಗ್ರಾಮದ ಹತ್ತಿರ ಇಬ್ಬರು ಆರೋಪಿಗಳನ್ನು ಬಂಧಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ