ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಮೀಕ್ಷೆಯಲ್ಲಿ ಬಣಜಿಗ (ಬಲಿಜ) ಸಮುದಾಯದವರು ಜಾತಿ ಕಾಲಂನಲ್ಲಿ ಬಲಿಜ ಎಂದು ನಮೂದಿಸಬೇಕು ಎಂದು ಸರ್ವ ಬಣಜಿಗ (ಬಲಿಜ)ರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಮೋಹನ್‌ಕುಮಾರ್ ಮನವಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಸೆ.22ರಿಂದ ಆರಂಭವಾಗಿರುವ ಸಮೀಕ್ಷೆಯ ಕಾಲಂ ನಂ 09ರಲ್ಲಿ ಕಡ್ಡಾಯವಾಗಿ ಕ್ರಮಸಂಖ್ಯೆ 0120 ಜೊತೆಗೆ ಬಲಿಜ ಎಂದು ನಮೂದಿಸಿ ಸಮುದಾಯದ ಒಳಿತಿಗೆ ಸಹಕರಿಸಬೇಕೆಂದು ಕೋರಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ನಾಗಾನಂದ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪ್ರಶಾAತ್, ಕಾರ್ಯದರ್ಶಿ ಎಚ್.ಪಿ.ಮೋಹನ್, ಖಜಾಂಚಿ ಎಂ.ವಿ.ಸ್ವರ್ಣಕುಮಾರ್ ಇದ್ದರು.




