ಭಾರತದಲ್ಲಿ ಒಂದು ಆರೋಗ್ಯಕರ ಸಮಾಜ,ಸಮುದಾಯ ಸೃಷ್ಟಿಸುವುದಕ್ಕೆ ಕೇಂದ್ರ ಸರ್ಕಾರ ಒಳ್ಳೆಯ ರೀತಿಯಲ್ಲಿ ಮುಂದುವರೆಯುತ್ತಿದೆ.ಒಳ್ಳೆ ಹೋರಾಟ ನಡಿತಾ ಇದೆ. ಆದರೆ ಇದು ಎಷ್ಟೇ ಆದರೂ ಸರ್ಕಾರದಿಂದ ಸಹಕಾರ ಬಂದರೂ ಸ್ವಯಂ ಒಂದು ಆಸಕ್ತಿಯಿಂದ ನಾವೇ ಆರೋಗ್ಯಕರ ಆಗ್ತೀನಿ. ನಾನೇ ಒಂದು ವ್ಯಾಯಾಮದಲ್ಲಿ ಒಳ್ಳೆ ಕೌಶಲ್ಯ ತಗೊಂಡು ಆರೋಗ್ಯಕ್ಕೋಸ್ಕರ ಸ್ವಯಂ ಪ್ರೇರಣೆಯ ಮನೋಭಾವನೆ ಬೆಳೆಸಿಕೊಳ್ಳುವುದು ಅವಶ್ಯ ಎಂದು ಮೈಸೂರು ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಮಂಡ್ಯ ನಗರದ ನೂರಡಿ ರಸ್ತೆಯ ಕರ್ನಾಟಕ ಬಾರ್ ಸರ್ಕಲ್ ನಲ್ಲಿ ನೂತನವಾಗಿ ಆರಂಭವಾದ ಗೋಲ್ಡ್ ಜಿಮ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯದ ದೃಷ್ಟಿಯಿಂದ ಇಂತಹ ಜಿಮ್‌ಗಳು ಬಹಳ ಅವಶ್ಯಕತೆ ಇದೆ.ಇದು ಸಾಮಾಜಿಕ ಪ್ರೇರಣೆ ಕೊಡುತ್ತದೆ..ಮಂಡ್ಯದಲ್ಲೂ ಇಂತಹ ಒಳ್ಳೆ ಅವಕಾಶ ಸೃಷ್ಟಿಸಿರುವುದು ಒಳ್ಳೆ ಬೆಳವಣಿಗೆ ಎಂದರಲ್ಲದೇ ಜಿಮ್‌ನ ಮಾಲೀಕರಿಗೆ ಅಭಿನಂದನೆಗಳನ್ನು ತಿಳಿಸಿದರು.
ಇವತ್ತು ನಾವೆಲ್ಲರೂ ಈ ವಿಕಸಿತ ಭಾರತಕ್ಕಾಗಿ ಮುಂದುವರೆಯುತ್ತಿದ್ದೇವೆ ಪ್ರಧಾನ ಮಂತ್ರಿಯವರು ಭಾರತದ ಸಮಗ್ರ ಸಂಪೂರ್ಣ ಅಭಿವೃದ್ಧಿಯ ಒಂದು ಒಳ್ಳೆಯ ದೃಷ್ಟಿಯನ್ನು ಇಟ್ಟಿದ್ದಾರೆ.ಭಾರತೀಯ ಸಮಾಜ ನಿಜಕ್ಕೂ ಒಂದು ಆರೋಗ್ಯಕರ ಸಮಾಜವಾದರೆ ಏನನ್ನಾದರೂ ಕೂಡ ಸಾಧಿಸಲಿಕ್ಕೆ ಸಾಧ್ಯ.ಅದಕಾಗಿ ಇಂತಹ ಒಂದು ಒಳ್ಳೆ ಸೌಲಭ್ಯವನ್ನು ನೀವೆಲ್ಲರೂ ಬಳಸಿಕೊಳ್ಳಿ ಎಂದರು.
ಮಂಡ್ಯ ಮತ್ತು ಅರಮನೆಗೆ ಅತ್ಯಂತ ಒಂದು ನಿಕಟವಾದ,ಭಾವನಾತ್ಮಕವಾದ ಒಂದು ಸಂಬಂಧವಿದೆ.ಅದು ಯಾವತ್ತು ಇದ್ದೇ ಇರುತ್ತದೆ. ಅದೇ ಸಂಬಂಧದೊಂದಿಗೆ ಮುಂದುವರೆಯೋಣ. ಒಂದು ಒಳ್ಳೆ ಸೇವೆ ಮಾಡೋ ದೃಷ್ಟಿಯಲ್ಲಿ ನಾವುಸದಾ ಮಂಡ್ಯಕ್ಕೆ ಬರ್ತಾ ಇರ್ತೀವಿ ಎಂದು ಹೇಳಿ ಚಾಮುಂಡೇಶ್ವರಿ ಆಶೀರ್ವಾದ ನಿಮ್ಮೆಲ್ಲರಿಗೂ ಇರಲಿ ಎಂಬ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಮ್ ಮಾಲೀಕರಾದ ಪ್ರಭಾವತಿ, ಬಿಜೆಪಿ ಮುಖಂಡರಾದ ಇಂಡುವಾಳು ಸಚ್ಚಿದಾನಂದ, ನಗರಸಭೆ ಮಾಜಿ ಅಧ್ಯಕ್ಷ ಮಂಜು, ಪ್ರಸನ್ನ, ಲಂಕೇಶ್ ಸೇರಿದಂತೆ ಇತರರು ಹಾಜರಿದ್ದರು.




