ಮಂಡ್ಯ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಗೆ ನಗರಸಭೆ ಮತ್ತು ಪುರಸಭೆಗಳಿಂದ ವಂತಿಕೆಯನ್ನು ಕೊಡಿಸಿಕೊಡುವ ಕುರಿತು ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ರಾಜಕೀಯವಲ್ಲದ ಯುವ ಜನಾಂಗದ ಶೈಕ್ಷಣಿಕ, ಬೌದ್ಧಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಳಿಂದ ಸ್ಥಳೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಪ್ರಪಂಚದ 216 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇದು 115 ವರ್ಷಗಳನ್ನು ಪೂರೈಸಿದೆ. ಈ ಸಂಸ್ಥೆಯಲ್ಲಿ ಜಾತಿ, ಮತ, ಅಂತಸ್ತುಗಳ ಭೇದವಿಲ್ಲದೆ ಮಕ್ಕಳಲ್ಲಿ ಶಿಕ್ಷಣ, ಶಿಸ್ತು, ಬೌದ್ಧಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಪ್ರೋತ್ಸಾಹ ನೀಡುತ್ತಿದೆ.
ಮುಂದಿನ ಪ್ರಜೆಗಳಾಗಿ ಅವರು ಸೇವೆ, ಸಮುದಾಯದ ಅಭಿವೃದ್ಧಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಕಾಪಾಡಲು, ಯುವ ಜನಾಂಗವನ್ನು ಸತ್ಪ್ರಜೆಗಳನ್ನಾಗಿ ಮಾಡಲು ಮಂಡ್ಯ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮಕ್ಕಳು ಸದಾ ಸಿದ್ದರಾಗಿರುತ್ತಾರೆ.
ಜಿಲ್ಲಾ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮತ್ತು ಶಿಕ್ಷಕ/ಶಿಕ್ಷಕಿಯರಿಗೆ ನಿರಂತರವಾಗಿ ತರಬೇತಿಗಳು ಮತ್ತು ಇನ್ನಿತರ ಸರ್ವತೋಮುಖ ಬೆಳವಣಿಗೆಗಳ ಕಾರ್ಯಕ್ರಮಗಳು ಸದಾ ನಡೆಯುತ್ತಿರುತ್ತದೆ. ಇದಕ್ಕೆ ಸರ್ಕಾರದಿಂದ ಅಥವಾ ಯಾವುದೇ ಇಲಾಖೆಯಿಂದ ಆರ್ಥಿಕ ಸಹಾಯ ವಿರುವುದಿಲ್ಲ.
ಆದ್ದರಿಂದ ತಮ್ಮ ವ್ಯಾಪ್ತಿಯಲ್ಲಿ ಬರುವ ನಗರಸಭೆಗಳಿಂದ ವಾರ್ಷಿಕ ರೂ. 20000/ ಪುರಸಭೆಗಳಿಂದ ರೂ. 10,000/- ಗಳನ್ನು ನಿರಂತರವಾಗಿ ನೀಡುವಂತೆ ಮಂಜೂರು ಮಾಡಿಸಿಕೊಟ್ಟು ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು ಎಂದು ಮನವಿ ಸಲ್ಲಿಸಿದರು.
ಇದೇ ವೇಳೆ ಸ್ಕೌಟ್ ಗೈಡ್ಸ್ ನ ಜಿಲ್ಲಾ ಆಯುಕ್ತರಾದ ಜಿ.ಪಿ. ಭಕ್ತವತ್ಸಲ, ಕೆ.ಸಿ. ನಾಗಮ್ಮ ರಮೇಶ್, ಜಿಲ್ಲಾಕಾರ್ಯದರ್ಶಿ ಶಿವರಾಮೇಗೌಡ, ಕೇಂದ್ರ ಸ್ಥಾನಿಕ ಆಯುಕ್ತರಾದ ಡಾ.ಅನಿಲ್ ಕುಮಾರ್, ಸ್ಥಾನಿಕ ಆಯುಕ್ತರುಗಳಾದ ಭವಾನಿ,ನಾಗರೇವಕ್ಕ, ಪದ್ಮಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.