Thursday, September 19, 2024

ಪ್ರಾಯೋಗಿಕ ಆವೃತ್ತಿ

ದೊಡ್ಡಮ್ಮತಾಯಿ ದೇವಸ್ಥಾನ ನಿರ್ಮಾಣಕ್ಕೆ ಸಚ್ಚಿದಾನಂದ ದೇಣಿಗೆ

ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಂಕನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನ ನಿರ್ಮಾಣಕ್ಕೆ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ 50,000 ರೂಪಾಯಿ ದೇಣಿಗೆ ನೀಡಿದರು.

ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ ಅವರನ್ನು ಮಂಗಳವಾದ್ಯಗಳೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ ಗ್ರಾಮಸ್ಥರು ಬರಮಾಡಿಕೊಂಡರು. ನಂತರ ದೇವಾಲಯ ಕಾಮಗಾರಿ ವೀಕ್ಷಿಸಿದ ಸಚ್ಚಿದಾನಂದ ನಿರ್ಮಾಣ ಕಾರ್ಯಕ್ಕೆ ಬಳಸಲು 50,000 ರೂಪಾಯಿ ದೇಣಿಗೆ ವಿತರಿಸಿದರು.

ಈ ಹಿಂದೆ ನಾವು ಸಚ್ಚಿದಾನಂದ ಅವರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ಧನಸಹಾಯ ಮಾಡುವಂತೆ ಪ್ರಸ್ತಾಪ ಮಾಡಿದ್ದೆವು.ಅವರು ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದ್ದರು.ಅವರಿಂದ ನಾವು 25,000 ಹಣ ಕೊಡುವಂತೆ ಕೇಳಿದ್ದೆವು.ಆದರೆ ಸಚ್ಚಿದಾನಂದ ಅವರು 50,000 ಹಣ ಸಹಾಯ ಮಾಡುವ ಮೂಲಕ ನಮ್ಮ ನಿರೀಕ್ಷೆಗಿಂತ ಹೆಚ್ಚಿನ ಧನಸಹಾಯ ಮಾಡಿದ್ದಾರೆ.ಅವರಿಗೆ ತಾಯಿ ದೊಡ್ಡಮ್ಮ ತಾಯಿ ಆಶೀರ್ವದಿಸಲಿ ಎಂದು ಗ್ರಾಮದ ಮುಖಂಡರು ಹಾರೈಸಿದರು.

ಬಳಿಕ ಗ್ರಾಮದಲ್ಲಿ ಇತ್ತೀಚೆಗೆ ಮರಣ ಹೊಂದಿದ್ದ ಚಿಕ್ಕತಾಯಮ್ಮ ಹಾಗೂ ಸಾಕಮ್ಮ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಸಚ್ಚಿದಾನಂದ ಆರ್ಥಿಕ ನೆರವು ವಿತರಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾ.ಪಂ ಅಧ್ಯಕ್ಷ ಶ್ರೀಧರ್, ಗ್ರಾಮದ ಯಜಮಾನರಾದ ರಾಮಕೃಷ್ಣ, ನಿಂಗೇಗೌಡ, ಜವರೇಗೌಡ, ಶಂಕರೇಗೌಡ, ಪ್ರದೀಪ್, ಮುಖಂಡರಾದ ಆನಂದ್, ಚೆಲುವೇಗೌಡ, ಲಿಂಗೇಗೌಡ, ಸಿದ್ದೇಗೌಡ, ನಂಜೇಗೌಡ, ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!