Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ‘ಸತ್ಯಶೋಧನೆ- 100 ಗಾಂಧೀಜಿ ಎಂಬ ವರ್ತಮಾನ’ : ಚಿಂತನ – ಮಂಥನ

ಕರ್ನಾಟಕ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಡ್ಯ ವಿಶ್ವವಿದ್ಯಾಲಯ, ಮಂಡ್ಯ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ನ.೧೨, ೧೩ ಮತ್ತು ೧೪ರಂದು ಮಂಡ್ಯ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ‘ಸತ್ಯಶೋಧನೆ-೧೦೦ ಗಾಂಧೀಜಿ ಎಂಬ ವರ್ತಮಾನ” ಮೂರು ದಿನಗಳ ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್‌ಗೌಡ ತಿಳಿಸಿದರು.

ಮಂಡ್ಯದಲ್ಲಿ0 ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನ.೧೨ರ ಬೆಳಿಗ್ಗೆ ೯ ರಿಂದ ೧೦ವರೆಗೆ ನೋಂದಣಿ ಕಾರ್ಯಕ್ರಮ ನಡೆಯಲಿದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ೧೫೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಅಂದು ಬೆಳಿಗ್ಗೆ ೧೦ ಗಂಟೆಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಅಧ್ಯಕ್ಷತೆಯ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಬಿ.ರಾಮಕೃಷ್ಣ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್‌ಗೌಡ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮಧ್ಯಾಹ್ನ ೨.೧೫ಕ್ಕೆ ಗೋಷ್ಠಿ-೧: ಸತ್ಯ ಶೋಧನೆ- ೧೦೦ ಮತ್ತು ವರ್ತಮಾನ, ಸಂಜೆ ೪ಕ್ಕೆ ಗೋಷ್ಠಿ-೨: ಗಾಂಧೀಜಿ ಪ್ರಭಾವಿಸಿದ ಜಾಗತಿಕ ಮನಸ್ಸುಗಳು ವಿಷಯ ಮಂಡನೆಯಾಗಲಿದೆ. ಸಂಜೆ.೬ಕ್ಕೆ ಬೊಮ್ಮರಸೇಗೌಡರ ಮಹಾತ್ಮ ಗಾಂಧಿ ಕಾವ್ಯ-ಗಮಕ ಮತ್ತು ವ್ಯಾಖ್ಯಾನ ಜರುಗಲಿದೆ. ನ.೧೩ರ ಬೆಳಿಗ್ಗೆ ೧೦.೩೦ಕ್ಕೆ ಗೋಷ್ಠಿ-೩: ಗಾಂಧೀಜಿ ಮತ್ತು ಕನ್ನಡ ಮನಸ್ಸು, ಮಧ್ಯಾಹ್ನ ೧೨.೧೫ಕ್ಕೆ ಗೋಷ್ಠಿ-೪: ಮಂಡ್ಯ ಜಿಲ್ಲೆಯ ಮೇಲೆ ಗಾಂಧೀಜಿ ಪ್ರಭಾವ, ಮಧ್ಯಾಹ್ನ ೨.೩೦ಕ್ಕೆ ಗೋಷ್ಠಿ-೫ ಗಾಂಧೀಜಿ-ಅಂಬೇಡ್ಕರ್ ವಿಚಾರಧಾರೆಗಳ ಸಮನ್ವಯ, ಸಂಜೆ ೪ಕ್ಕೆ ಗೋಷ್ಠಿ-೬ ಗಾಂಧೀಜಿ ಅವರ ಶಿಕ್ಷಣದ ನೆಲೆಗಳು, ನ.೧೪ ಬೆಳಿಗ್ಗೆ ೧೦.೩೦ಕ್ಕೆ ಗೋಷ್ಠಿ-೭ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ: ಗಾಂಧೀಜಿ ನಿಲುವುಗಳು, ಮಧ್ಯಾಹ್ನ ೧೨.೧೫ಕ್ಕೆ ಗೋಷ್ಠಿ- ೮: ನನ್ನ ಕಣ್ಣೋಟದಲ್ಲಿ ಗಾಂಧೀಜಿ ಆಯ್ದ ಶಿಬಿರಾರ್ಥಿಗಳಿಂದ ಗಾಂಧೀಜಿ ಅವರ ಕುರಿತ ಅನಿಸಿಕೆಗಳು ವಿಷಯಗಳ ಮಂಡನೆಯಾಗಿದೆ ಎಂದು ವಿವರಿಸಿದರು.

ಮಧ್ಯಾಹ್ನ ೩.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಂಡ್ಯ ವಿವಿಯ ಕುಲಪತಿಗಳಾದ ಪ್ರೊ.ಕೆ.ಶಿವಚಿತ್ತಪ್ಪ ಸಮಾರೋಪ ಭಾಷಣ ಮಾಡುವರು. ವಿದ್ವಾಂಸರಾದ ಡಾ.ರಾಗೌಡ ಅಧ್ಯಕ್ಷತೆ ವಹಿಸುವರು. ಜಿ.ಪಂ ಸಿಇಓ ಕೆ.ಆರ್.ನಂದಿನಿ ಪ್ರಮಾಣ ಪತ್ರ ವಿತರಿಸುವರು. ಮುಖ್ಯ ಅತಿಥಿಗಳಾಗಿ ಗಾಂಧಿಭವನದ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಮಂಡ್ಯ ಸರ್ವೋದಯ ಮಂಡಳದ ಎಂ.ಬಿ.ಬೋರೇಗೌಡ, ಪಟೇಲ್ ಚಾರಿಟಬಲ್ ಟ್ರಸ್ಟ್‌ನ ಜೆ.ರಾಜಶೇಖರಯ್ಯ ಭಾಗವಹಿಸಿವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ನಿರ್ದೇಶಕ ಹನಕೆರೆ ನಾಗಪ್ಪ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ