ಕಾಂಗ್ರೆಸ್ ಮತ್ತು ಜೆಡಿಎಸ್ ಮೈಶುಗರ್ ಕಾರ್ಖಾನೆಗೆ ಬೀಗ ಹಾಕಿದ್ರು. ಕಾರ್ಖಾನೆ ಆರಂಭಿಸಿದ್ದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ. 2023ಕ್ಕೆ ಕರ್ನಾಟಕ ಕಾಂಗ್ರೆಸ್ ಮುಕ್ತ ಆಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಮದ್ದೂರಿನಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಮದ್ದೂರಿನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಯಾತ್ರೆ ಇದಾಗಿದೆ. ತಮ್ಮ ಸಂಘಟನೆಯ ಶಕ್ತಿ ಬಗ್ಗೆ ಎಸ್.ಪಿ. ಸ್ವಾಮಿ ತೋರಿಸಿದ್ದಾರೆ. ಮಂಡ್ಯದ 7 ಕ್ಷೇತ್ರಗಳಲ್ಲೂ ಉತ್ತಮ ನಾಯಕರು ಬಿಜೆಪಿಗೆ ಬಂದಿದ್ದಾರೆ. ಇದರಿಂದ
ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಭಯ ಶುರುವಾಗಿದೆ ಎಂದರು.

ಮೋದಿ, ಅಮಿತ್ ಶಾ ಬಂದ ಮೇಲೆ ಆಟ ನಡೆಯಲ್ಲ ಎಂದು ಖರ್ಗೆ ಅವರೇ ಹೇಳಿದ್ದಾರೆ. ಅದರಂತೆ
ಮಂಡ್ಯದಲ್ಲಿ ಮುಂದೆ ನಮ್ಮದೇ ಆಟ ನಡೆಯುವುದು. ಸುಮಲತಾ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಈ ಜಿಲ್ಲೆಯಲ್ಲಿ ಮಣ್ಣು ಮುಕ್ಕಿದ್ದಾರೆ. ಈ ಚುನಾವಣೆ ಕಾಂಗ್ರೆಸ್ ಜೆಡಿಎಸ್‌ಗೆ ಕಡೇ ಚುನಾವಣೆ. ಟಿಪ್ಪು ಡ್ರಾಪ್‌ನಿಂದ ಬೀಳುವವರೆಗೂ ಕಾಂಗ್ರೆಸ್ ಟಿಪ್ಪುವನ್ನು ಬಿಡುವುದಿಲ್ಲ. ಪಾಕಿಸ್ತಾನ ಈಗ ದಿವಾಳಿಯಾಗಿದೆ. ಗಡಿಯಲ್ಲಿ ಚೈನಾದವರು ಒಂದು ಹೆಜ್ಜೆ ಇಡಲು ಬಿಡದೇ ನಮ್ಮ ಸೈನಿಕರು ಕಾಯುತ್ತಿದ್ದಾರೆ. ಇದು ನರೇಂದ್ರ ಮೋದಿ ಸರ್ಕಾರ ಎಂದರು.
ಜೆಡಿಎಸ್‌ನವರು 15 ಸೀಟ್ ಗೆದ್ದರೆ ಎಲ್ಲಾದ್ರು ಒಂದು ಕಡೆ ತೂರಿಕೊಳ್ಳುವ ತವಕದಲ್ಲಿದ್ದಾರೆ. ಅವರ ಕನಸಲ್ಲೂ 115 ಸೀಟ್ ಗೆಲ್ಲಲ್ಲ. 2023ಕ್ಕೆ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲಿದೆ ಎಂದು ವ್ಯಂಗ್ಯವಾಡಿದರು.




