ಮದ್ದೂರು ತಾಲ್ಲೂಕಿನ ಭಾರತೀನಗರ ವ್ಯಾಪ್ತಿಯ ಜಾನಕಿರಾಮು ಎಂಬುವರ ಬೆನ್ನುಹುರಿ ಚಿಕಿತ್ಸೆಗೆ ಸಮಾಜ ಸೇವಕ ಕದಲೂರು ಉದಯ್ ಅವರು ಧನಸಹಾಯ ಮಾಡಿದರು.
ಜಾನಕಿರಾಮು ಅವರ ಬಳ ಚಿಕಿತ್ಸಾ ವೆಚ್ಚಕ್ಕೆ ಹಣವಿಲ್ಲದಿರುವುದನ್ನು ಅರಿತ ಕದಲೂರು ಉದಯ್ ತಮ್ಮ ಚಾರಿಟಬಲ್ ಟ್ರಸ್ಟ್ ಧನ ಸಹಾಯ ನೀಡಿದರು.
ನಂತರ ಮಾತನಾಡಿದ ಕದಲೂರು ಉದಯ್, ನಾನು ಯಾವುದೇ ರಾಜಕೀಯ ಉದ್ದೇಶ ಇಟ್ಟಿಕೊಂಡು ಇದನ್ನೆಲ್ಲ ಮಾಡುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಟ್ರಸ್ಟ್ ವತಿಯಿಂದ ಸಹಾಯ ಹಸ್ತ ನೀಡುತ್ತಾ ಬಂದಿದ್ದೇನೆ. ಇದು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಜನ ಸೇವೆಗೆ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಮಾಜಿ ಸೈನಿಕರ ಗೌರವ ಅಧ್ಯಕ್ಷ ಸಿಪಾಯಿ ಶ್ರೀನಿವಾಸ್, ಕದಲೂರು ತಿಮ್ಮೇಗೌಡ, ಯತೀಶ್,ಅಣ್ಣೂರು ಮನೋಹರ, ಹರೀಶ್ ಮತ್ತಿತರರದ್ದರು




