Sunday, November 22, 2026

ಪ್ರಾಯೋಗಿಕ ಆವೃತ್ತಿ

ಕುಂಭಮೇಳ: ಭಕ್ತಾದಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಅಶೋಕ್ ಜಯರಾಂ

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳಲು ಭಕ್ತಾದಿಗಳಿಗೆ ಬಿಜೆಪಿ ಮುಖಂಡ,ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ.

ಮಹಾ ಕುಂಭಮೇಳದ ಉದ್ಘಾಟನಾ ದಿನವಾದ ಇಂದು ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವಾರು ಗ್ರಾಮಗಳಿಗೆ ಮತ್ತು ಮಂಡ್ಯ ನಗರದ ಭಕ್ತಾದಿಗಳಿಗೆ ಕುಂಭಮೇಳ ದರ್ಶನ ಮಾಡಸಲು ಇಂದು 10 ಬಸ್ ವ್ಯವಸ್ಥೆ ಮಾಡಲಾಗಿತ್ತು.ಮಂಡ್ಯ ನಗರಕ್ಕೆ 4 ಬಸ್,ಬಸರಾಳು,ಕೆರಗೋಡು ಹಾಗೂ ಕಸಬಾ ಹೋಬಳಿಗಳಿಗೆ ತಲಾ 2 ಬಸ್ ಗಳ ವ್ಯವಸ್ಥೆ ಮಾಡಲಾಗಿತ್ತು.

ಮಂಡ್ಯ ಕ್ಷೇತ್ರದ ಭಕ್ತ ಜನರು ಕೆ.ಆರ್.ಪೇಟೆ ತಾಲ್ಲೂಕಿನ ಗಡಿ ಗ್ರಾಮ ಅಕ್ಕಿಹೆಬ್ಬಾಳು ಹೋಬಳಿಯ ಅಂಬಿಗರಹಳ್ಳಿ,ಪುರ,ಸಂಗಾಪುರಕ್ಕೆ ಹೋಗಲು ಯಾವುದೇ ಕಷ್ಷವಾಗಬಾರದು ಎಂಬ ಉದ್ದೇಶದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.ಕಾವೇರಿ,ಲಕ್ಷ್ಮಣತೀರ್ಥ,ಹೇಮಾವತಿ ನದಿಗಳು ಸಂಗಮವಾಗುವ ಪವಿತ್ರ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋಗಿ ದರ್ಶನ ಪಡೆಯಲು ಅಳಿಲು ಸೇವೆ ಮಾಡಿದ್ದೇನೆ ಎಂದು ಅಶೋಕ್ ಜಯರಾಂ ತಿಳಿಸಿದರು.

ಅ.15 ರಂದು ಬೆಳಿಗ್ಗೆ ಮಂಡ್ಯ ನಗರ ಹಾಗೂ ಗ್ರಾಮಾಂತರ ಪ್ರದೇಶಕ್ಕೆ ತಲಾ 10 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ‌. ಕೊನೆಯ ದಿನವಾದ ಅ.16 ರಂದು ಮಂಡ್ಯ ನಗರ ಹಾಗೂ ಗ್ರಾಮಾಂತರ ಪ್ರದೇಶಕ್ಕೆ ತಲಾ15 ಬಸ್ ಗಳ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ