ನೌಕರರು ಆರೋಗ್ಯ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಉದ್ಯಮಗಳ ಬೆಳವಣಿಗೆಗೆ ಕೊಡುಗೆ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರ ನೋಡಬೇಕು ಎಂದು ಫೇವರಿಚ್ ಗ್ರೂಪ್ ಉಪಾಧ್ಯಕ್ಷ ಆರ್.ದಯಾನಂದಕುಮಾರ್ ಅಭಿಪ್ರಾಯಪಟ್ಟರು.
ಕೆ.ಆರ್.ಪೇಟೆ ತಾಲೂಕಿನ ಬಣ್ಣೇನಹಳ್ಳಿ ಗ್ರಾಮದಲ್ಲಿರುವ ಫೇವರಿಚ್ ಗ್ರೂಪ್ನ ಮೆಗಾ ಫುಡ್ಪಾರ್ಕ್ನಲ್ಲಿ ಫೇವರಿಚ್ ಗ್ರೂಪ್ ಹಾಗೂ ರೋಟರಿ ಬೆಂಗಳೂರು ಮಹಾಲಕ್ಷ್ಮಿ ಸೆಂಟ್ರಲ್ ಸಹಾಯೋಗದಲ್ಲಿ ಫುಡ್ಪಾರ್ಕ್ ಆವರಣದಲ್ಲಿರುವ ಉದ್ಯಮಗಳ ನೌಕರರು, ಅವರ ಕುಟುಂಬ ಸದಸ್ಯರಿಗೆ ಮೆಗಾ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಫೇವರಿಚ್ ಗ್ರೂಪ್ಗೆ 40 ವರ್ಷದ ಅನುಭವವಿದೆ. ಸಣ್ಣ ಉದ್ಯಮದಿಂದ ದೊಡ್ಡ ಉದ್ಯಮವಾಗಿ ಗ್ರೂಪನ ಅಧ್ಯಕ್ಷ ಜಯದೇವ ಬೆಳೆಸಿದ್ದಾರೆ. ಮೊದಲಿಗೆ ಕೃಷಿ ಸರಕು ವ್ಯಾಪಾರ, ಆಮದು, ರಫ್ತು ಹಾಗೂ ತಯಾರಿಕಾ ಕ್ಷೇತ್ರಗಳಿಗೆ ವಿಸ್ತರಣೆ ಆಗಿದೆ. ಈಗ ಕೃಷಿ ಹಾಗೂ ಆಹಾರ ಸಂಬಂಧಿತ ಉದ್ಯಮಕ್ಕೂ ಪಾದರ್ಪಣೆ ಮಾಡಿದೆ. ಗ್ರೂಪ್ ದೇಶದಲ್ಲಿ ಸ್ನ್ಯಾಕ್ ಆಹಾರ ಕಚ್ಚಾ ವಸ್ತುಗಳ ತಯಾರಿಕೆ ಹಾಗೂ ಪೂರೈಕೆ ಮಾಡುತ್ತಿದ್ದಾರೆ. ಪೆಪ್ಸಿಕೋ, ಪಾರ್ಲೆ, ಐಟಿಸಿ ಸೇರಿದಂತೆ ಹಲವು ಜಾಗತಿಕ ಸಂಸ್ಥೆಗಳಿಗೆ ಪೂರೈಸುತ್ತಿದೆ ಎಂದು ಹೇಳಿದರು.
2014 ರಲ್ಲಿ ಹೊಸತಂತ್ರಜ್ಞಾನದಿಂದ ಮೂಲಸೌಕರ್ಯ ಕ್ಷೇತ್ರಕ್ಕೆ ಪ್ರವೇಶಿಸಿ, ಮೆಗಾ ಫುಡ್ ಪಾರ್ಕ್ ಮತ್ತು ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಿಸಲಾಗಿದ್ದು, ಉದ್ಯಮಿಗಳಿಗೆ ಸುಗಮ ಹಾಗೂ ತೊಂದರೆರಹಿತ ವಾತಾವರಣ ಒದಗಿಸುವುದು – ಭೂಮಿ ಹಂಚಿಕೆ, ಹೂಡಿಕೆ ಬೆಂಬಲ, ಮೂಲಭೂತ ಹಾಗೂ ಅಗತ್ಯ ಸೌಲಭ್ಯಗಳು ಹಾಗೂ ಕಾನೂನು ಅನುಮತಿಗಳ ಸಹಾಯ, ಫುಡ್ ಪಾರ್ಕ್ನಲ್ಲಿರುವ ಕೈಗಾರಿಕೆಗಳು ರೈತರಿಂದ ನೇರವಾಗಿ ಕಚ್ಚಾ ವಸ್ತುಗಳನ್ನು ಖರೀದಿಸುವ ಮೂಲಕ ಮಧ್ಯವರ್ತಿಗಳ ನಿವಾರಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಗ್ರಾಮೀಣ ಯುವಕರಿಗೆ ಸ್ಮಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ, ಜನಸಂದಣಿಯ ನಗರಗಳಿಗೆ ವಲಸೆ ಹೋಗುವದನ್ನು ತಡೆಯಲಾಗುತ್ತಿದೆ ಎಂದರು.
ಬೆಂಗಳೂರಿನ ಆಸರೆ ರೋಟರಿ ಸೆಂಟರ್ ತಂಡದ 120 ಜನ ರಕ್ತ ದಾನ ಮಾಡಿದರ. 300 ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆಯನ್ನ ಭರತ ಕ್ಯಾನ್ಸರ್ ಆಸ್ಪತ್ರೆ ನಡೆಸಿತು. 280 ಜನರಿಗೆ ಕಣ್ಣಿನ ತಪಾಸಣೆ ನಡೆಸಿ, ಅವಶ್ಯಕತೆ ಇರುವ 120 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಪಿಡಿಜಿ ಡಾ.ನಾಗೇಂದ್ರ, ಬೆಂಗಳೂರಿನ ಮಹಾಲಕ್ಷ್ಮಿ ಸೆಂಟರಲ್ ರೋಟರಿ ಅಧ್ಯಕ್ಷ ಪ್ರಶಾಂತ್ ರಾವ್, ಸಂಸ್ಥೆಯ ನಿರ್ದೇಶಕ ವಿಶಾಲ್ ನಾಯಡು, ಸಂಸ್ಥೆಯ ಅಧ್ಯಕ್ಷ ಜಯದೇವ್, ಕಾರ್ಯದರ್ಶಿ ಚಿರುದೀಪ್ ಇದ್ದರು.




