Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಗತಿಪರ ಸಂಘಟನೆಯಿಂದ ರಾಷ್ಟ್ರಧ್ವಜ ಅಭಿಯಾನ

ಸ್ವಾತಂತ್ರ್ಯ ಪೂರ್ವದಲ್ಲಿ ಸಂಘಟನೆ ದೇಶಾಭಿಮಾನಕ್ಕೆ ರೂಪುಗೊಂಡ ತ್ರಿವರ್ಣಧ್ವಜ ಸ್ವಾತಂತ್ರ್ಯ ನಂತರ ಕೂಡ ದೇಶಾಭಿಮಾನ ಮತ್ತು ಏಕತೆ ಪ್ರತೀಕವಾಗಿ ಮುಂದುವರೆದಿದೆ ಎಂದು ಪ್ರಗತಿಪರ ಸಂಘಟನೆಯ ಮಾರ್ಗದರ್ಶಕ ನ.ಲಿ.ಕೃಷ್ಣ ತಿಳಿಸಿದರು.

ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ಮದ್ದೂರಿನ ಪ್ರೊ. ಎಮ್. ಡಿ. ನಂಜುಂಡಸ್ವಾಮಿ ರೈತ ಚೈತನ್ಯ ಕೇಂದ್ರದಲ್ಲಿ ಧ್ವಜರೋಹಣ ವೇಳೆ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹಿರಿಯರು ನಡೆಸಿದ ಹೋರಾಟ ತ್ಯಾಗ ಬಲಿದಾನ ಸ್ಮರಿಸುವ, ದೇಶದ ಏಕತೆಗಾಗಿ ಅಮೃತ ಮಹೋತ್ಸವದ ಈ ಅಮೃತ ಘಳಿಗೆಯಲ್ಲಿ ಸಂಕಲ್ಪ ಮಾಡಬೇಕಾಗಿದೆ ಎಂದರು.

ಪ್ರಧಾನ ಸಂಚಾಲಕ ವಿ. ಸಿ. ಉಮಾಶಂಕರ್ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವಾ ಹರ್ ಘರ್ ತಿರಂಗ ಅಭಿಯಾನಕ್ಕೆ ಮದ್ದೂರು ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಹಭಾಗಿಯಾಗಿ ಈ ದಿನ ಮನೆ ಮನೆ ಯಲ್ಲಿ ದ್ವಜ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ ಎಂದರು.

ಸಂಚಾಲಕ ಸೊ ಶಿ ಪ್ರಕಾಶ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳ ತುಂಬಿದ ಈ ಸಂದರ್ಭ ಮಹತ್ವದ್ದು. ಇಂತಹ ಕಾರ್ಯಕ್ರಮ ವಿಶಿಷ್ಟವಾಗಬೇಕೆಂಬ ಪ್ರಧಾನಿ ಮಂತ್ರಿಯವರ ಕರೆಗೆ ಇಡಿ ದೇಶ ಸ್ಪಂದಸಿ ದೇಶಾಭಿಮಾನ ಮೆರೆದಿದೆ.

ಇಂದು ಹಳ್ಳಿಯಿಂದ ದೆಹಲಿವರೆಗೆ ಮನೆ ಮನೆಗಳಲ್ಲಿ ಮನ ಮನಗಳಲ್ಲಿ ತ್ರಿವರ್ಣದ್ವಜ ಅರಳಿದೆ ಎಂದರು ರೈತ ಮುಖಂಡ ದೇವರಹಳ್ಳಿ ರಾಮಲಿಂಗೇಗೌಡ ಧ್ವಜರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಕೆ. ಜಿ. ಉಮೇಶ್ ಪ್ರಭುಲಿಂಗು ತಿಪ್ಪೂರು ರಾಜೇಶ್ ರೇಷ್ಮೆಬೆಳೆಗಾರರ ಸಂಘದ ಶಿವಲಿಂಗಯ್ಯ, ತಿಪ್ಪೂರು ಮನೋಹರ ಗೌಡ ಪ್ರಗತಿಪರ ಸಂಘಟನೆಯ ಸಂಚಾಲಕ ಶ್ರೀಕ ಶ್ರೀನಿವಾಸ್, ಗ್ರಾಪಂ ಸದಸ್ಯ ಶಿವಲಿಂಗಯ್ಯ, ರಮೇಶ್, ಜಗದೀಶ್, ಸಾಗರ್, ಪಟೇಲ್ ಹರೀಶ್, ಶೇಖರಪ್ಪ, ಚಾಮನಹಳ್ಳಿ ರಾಮಯ್ಯ ಸೊಂಪುರ ಉಮೇಶ್ . ರಮೇಶ್. ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!