ಎಲ್ಲರೊಳಗೊಂದಗೂ ವಿನಯ್ ಕುಮಾರ್ ಎಂ ಅವರ ಜನ್ಮದಿನದ ಅಂಗವಾಗಿ ಇಂದು ಬೂದನೂರು ಹಬ್ಬದ ಉತ್ಸವ ಮೆರೆವಣಿಗೆಯಲ್ಲಿ ಕನ್ನಡ ಧ್ವಜಗಳು ಹಾಗೂ 100 ಅಡಿ ಕನ್ನಡದ ಧ್ವಜ ಮೆರವಣಿಗೆ ನಡಸಲಾಯಿತು. ಇದೇ ಸಂದರ್ಭದಲ್ಲಿ ಪುಟಾಣಿಗಳ ಜೊತೆ ಕೇಕ್ ಕತ್ತರಿಸಿ ತಿನಿಸುವ ಮೂಲಕ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೈತ ಸಂಘದ ಮಂಡ್ಯ ತಾಲೂಕು ಅಧ್ಯಕ್ಷರಾದ ಬೂದನೂರು ಪುಟ್ಟಸ್ವಾಮಿ, ಸತೀಶ್ ಕರುನಾಡ ಸೇವಕರ ಸಂಘಟನೆಯ ರಾಜ್ಯ ವಕ್ತಾರ ಎಂ ಬಿ ನಾಗಣ್ಣಗೌಡ, ಚಿತ್ರಕೂಟ ಸಾಂಸ್ಕೃತಿಕ ಸಂಘಟನೆಯ ಮುಖ್ಯಸ್ಥ ಧನುಷ್ ಗೌಡ, ಕರ್ನಾಟಕ ರಾಜ್ಯಶೋಷಿತ ಸಮುದಾಯಗಳ ಒಕ್ಕೂಟದ ರಾಜೇಂದ್ರ ಭಾಗವಹಿಸಿದ್ದರು. ರೈತಪರ ಕನ್ನಡ ಪರ ಚಳುವಳಿಗಳು ಸಂಘಟನೆಗಳು ಪಾಲ್ಗೊಂಡಿದ್ದವು.




