ಬದುಕಿನ ಯಾತ್ರೆ ಸುದೀರ್ಘವಾದುದು,ಬದುಕಿನ ಯಾತ್ರೆಯ ಕಾಲಘಟ್ಟದಲ್ಲಿ ನಮಗೆ ಬೇಕಾದಂತಹ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಬದುಕು ನರಕವಾಗುತ್ತದೆ. ಹಾಗಾಗಿ ಒಳ್ಳೆಯ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಮಂಡ್ಯದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಶುಕ್ರವಾರ ಸಂಜೆ ಗುರುದೇವ ಲಲಿತ ಕಲಾ ಅಕಾಡೆಮಿಯ ರಜತೋತ್ಸವ ಸಮಾರಂಭದ ಅಂಗವಾಗಿ ಮೂರು ದಿನಗಳ ಕಾಲ ನಡೆಯಲಿರುವ ಗುರುದೇವೋತ್ಸವ 2022ರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ನಮ್ಮ ಬದುಕು ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯದ ಕಡೆ ಇರಬೇಕು.ಮನುಷ್ಯ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಸಾಗಬೇಕು.ಒಂದು ವೇಳೆ ಮೌಲ್ಯ ಅಳವಡಿಸಿಕೊಳ್ಳದ ಮನುಷ್ಯನ ಜೀವನ ಸದಾ ನರಕವಾಗಿರುತ್ತದೆ.ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಬೇಕೆಂದು ತಿಳಿಸಿದರು.
ಕಲೆಗೆ ಮಹತ್ವ ನೀಡಿ
ತುಮಕೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಸಿದ್ದೇಗೌಡ ಅವರು ಮಾತನಾಡಿ,ಕಲೆಯನ್ನು ಹೆಚ್ಚು ಪೋಷಿಸುವವರಿಗೆ ಹೆಚ್ಚಿನ ವ್ಯವಹಾರದ ಜ್ಞಾನವಿರುತ್ತದೆ. ಕಲೆ ಎಂಬುದು ಶಿಸ್ತು, ಸಮಯ ಪ್ರಜ್ಞೆಯನ್ನು ಕಲಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಏಳು ಕಾರ್ಯಗಳಿವೆ, ಅವುಗಳಲ್ಲಿ ಕಲೆಯ ಪೋಷಣೆ ಬಹಳ ಮುಖ್ಯವಾದದ್ದು ಎಂದು ತಿಳಿಸಿದರು.
ಸಮಾಜದ ಔಪಚಾರಿಕ ಮತ್ತು ಅನೌಪಚಾರಿಕ ನಿಯಂತ್ರಣವನ್ನು ನಮ್ಮ ನಡವಳಿಕೆಯ ಮೇಲೆ, ನಮ್ಮ ಜೀವನದ ಕ್ರಮದ ಮೇಲೆ, ನಮ್ಮ ಅಭಿವೃದ್ದಿ ಕ್ರಮದ ಮೇಲೆ ನಿಯಂತ್ರಿಸುವ ಶಕ್ತಿ ಕಲೆಗೆ ಇದೆ. ಇಂಥ ಕಲೆಯನ್ನು ಪ್ರೋತ್ಸಾಹಿಸುತ್ತಾ, ಬೆಳೆಸುತ್ತಾ, ಪಸರಿಸುತ್ತಾ ಹೋಗಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ಚೇತನ, ಪಿ. ಎಂ. ರಾಧಾಕೃಷ್ಣ, ಡಾ. ಟಿ.ಎಸ್, ಸತ್ಯನಾರಾಯಣರಾವ್, ಡಾ, ಶ್ರೀನಿವಾಸ್ ಶೆಟ್ಟಿ ,ಬಿ ಜಯಪ್ರಕಾಶ್ ಗೌಡ,ಡಾ. ಬಿ.ಎಸ್, ಕಕ್ಕಿಲಾಯ, ಲಕ್ಷ್ಮಿ ನಾರಾಯಣ್ ಕಜೆ ಸೇರಿದಂತೆ ಇತರರು ಉಪಸ್ಥಿತರಿದ್ದರು.




